ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು, ಶಿಕ್ಷಣ ಫೌಂಡೇಶನ್ ಮತ್ತು ಮೈಕ್ರೋಸಾಫ್ಟ್ ರಿಸರ್ಚ್ ಇಂಡಿಯಾದ ಸಹಯೋಗದೊಂದಿಗೆ ಸರ್ಕಾರಿ ಶಾಲೆಗಳಲ್ಲಿ ಕಲಿಕೆಯ ಫಲಿತಾಂಶಗಳನ್ನು ಸುಧಾರಿಸುವ ಗುರಿಯೊಂದಿಗೆ ʼಶಿಕ್ಷಣ ಕೋಪೈಲಟ್ʼ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪ ತಿಳಿಸಿದ್ದಾರೆ.
ರಾಜ್ಯದ ನಗರ ಮತ್ತು ಗ್ರಾಮೀಣ ಭಾಗಗಳ 750 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಂದ ಆಯ್ದ 1,000 ಶಿಕ್ಷಕರಿಗೆ ʼಶಿಕ್ಷಣ ಕೋಪೈಲಟ್ – ಎಐʼ ಚಾಲಿತ ಡಿಜಿಟಲ್ ಸಹಾಯವನ್ನು ನೀಡಲಾಗುವುದು. ಶಿಕ್ಷಕರ ಹಿಮ್ಮಾಹಿತಿ ಆಧಾರದ ಮೇಲೆ ಚಟುವಟಿಕೆಗಳು, ಮೌಲ್ಯಮಾಪನಗಳು, ಅನ್ವಯಗಳು, ಸಮಗ್ರ ಪಾಠ ಯೋಜನೆಗಳಂತಹ ಬೋಧನಾ ಸಂಪನ್ಮೂಲ ರಚಿಸಲು ಶಿಕ್ಷಣ ಕೋಪೈಲಟ್ ಸಹಾಯಕ ಎಂದು ತಿಳಿಸಿದ್ದಾರೆ.