HomeKarnatakaಬೈಕ್ ಗೆ ಡಿಕ್ಕಿ ಹೊಡೆದ ಬೊಲೆರೋ: ಪತ್ನಿ ಸ್ಥಳದಲ್ಲೇ ದುರ್ಮರಣ; ಪತಿ ಸ್ಥಿತಿ ಗಂಭೀರ

ಬೈಕ್ ಗೆ ಡಿಕ್ಕಿ ಹೊಡೆದ ಬೊಲೆರೋ: ಪತ್ನಿ ಸ್ಥಳದಲ್ಲೇ ದುರ್ಮರಣ; ಪತಿ ಸ್ಥಿತಿ ಗಂಭೀರ

ಚಿಕ್ಕಬಳ್ಳಾಪುರ: ಬೈಕ್ ಹಾಗೂ ಬೊಲೆರೋ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರದ ಕೆಂಚಾರ್ಲಹಳ್ಳಿ ಬಳಿ ನಡೆದಿದೆ.

ತರನಂ (22) ಮೃತ ಮಹಿಳೆ. ಅಪಘಾತದಲ್ಲಿ ತರನಂ ಪತಿ ಅಯಾಜ್ ಗೆ ಗಂಭೀರ ಗಾಯಗಳಾಗಿವೆ. ಬೊಲೆರೋದಲ್ಲಿದ್ದ ಹಲವರು ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಬೊಲೆರೋ ವಾಹನ ಚಾಲಕ ಅತಿ ವೇಗದಿಂದ ವಾಹನ ಚಲಾಯಿಸುತ್ತಿದ್ದುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡಿರುವ ಅಯಾಜ್ ನನ್ನು ಕೋಲಾರ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular