HomeKarnatakaBIG NEWS: ಚನ್ನಪಟ್ಟಣ ರಾಜಕಾರಣ ತಿಳಿದವರಿಗೆ ಅಲ್ಲಿನ ಅಭ್ಯರ್ಥಿ ಗೊತ್ತಾಗುತ್ತೆ: ಸಿ.ಟಿ.ರವಿ ಮಾರ್ಮಿಕ ಹೇಳಿಕೆ

BIG NEWS: ಚನ್ನಪಟ್ಟಣ ರಾಜಕಾರಣ ತಿಳಿದವರಿಗೆ ಅಲ್ಲಿನ ಅಭ್ಯರ್ಥಿ ಗೊತ್ತಾಗುತ್ತೆ: ಸಿ.ಟಿ.ರವಿ ಮಾರ್ಮಿಕ ಹೇಳಿಕೆ

ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಗೆ ಎನ್ ಡಿಎ ಅಭ್ಯರ್ಥಿ ನಾನೇ ಎಂಬ ಸಿ.ಪಿ.ಯೋಗೇಶ್ವರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ, ಯಾರು ಅಭ್ಯರ್ಥಿಯಾಗಬೇಕು ಎಂದು ಎಲ್ಲಿ ಹೇಳಬೇಕೋ ಅಲ್ಲಿ ಹೇಳಿದ್ದೇನೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಸಿ.ಟಿ.ರವಿ ಕ್ಷೇತ್ರದ ಜನರ ಅಭಿಪ್ರಾಯದಂತೆ ಅಭ್ಯರ್ಥಿ ಕಣಕ್ಕಿಳಿಯಬೇಕು. ಎಲ್ಲರೂ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ನಾನು ನನ್ನ ಅಭಿಪ್ರಾಯವನ್ನು ಎಲ್ಲಿ ಹೇಳಬೇಕೋ ಅಲ್ಲಿ ಹೇಳಿದ್ದೇನೆ ಎಂದರು.

ಚನ್ನಪಟ್ಟಣ ರಾಜಕಾರಣ ತಿಳಿದವರಿಗೆ ಅಲ್ಲಿನ ಅಭ್ಯರ್ಥಿ ಗೊತ್ತಾಗುತ್ತೆ. ಜನರ ಅಭಿಪ್ರಾಯದಂತೆ ಅಭ್ಯರ್ಥಿ ಕಣಕ್ಕಿಳಿಸಲಾಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular