HomeKarnatakaBIG NEWS: ಉದ್ಯಮಿ ತಂದೆ ಸಾವಿನ ಬಗ್ಗೆ ಅನುಮಾನ; ತಾಯಿ ವಿರುದ್ಧ ದೂರು ದಾಖಲಿಸಿದ್ದ ಮಗಳು:...

BIG NEWS: ಉದ್ಯಮಿ ತಂದೆ ಸಾವಿನ ಬಗ್ಗೆ ಅನುಮಾನ; ತಾಯಿ ವಿರುದ್ಧ ದೂರು ದಾಖಲಿಸಿದ್ದ ಮಗಳು: ಇಬ್ಬರು ಆರೋಪಿಗಳು ಅರೆಸ್ಟ್

ಬೆಳಗಾವಿ: ಉದ್ಯಮಿ ತಂದೆ ಸಾವಿನ ಬಗ್ಗೆ ಅನುಮಾನಗೊಂಡು ತಾಯಿ ಸೇರಿದಂತೆ ಕುಟುಂಬದ ವಿರುದ್ಧವೇ ಮಗಳು ದೂರು ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬೆಳಗಾವಿಯ ಮಾಳಮಾರುತಿ ಪೊಲೀಸರು ಬಂಧಿಸಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮಿ ಸಂತೋಷ್ ಪದ್ಮಣ್ಣವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ಆರೋಪಿ ಶೋಭಿತ್ ಗೌಡ ಹಾಗೂ ಇನ್ನೋರ್ವ ಆರೋಪಿಯನ್ನು ಹುಬ್ಬಳ್ಳಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ವಿಚಾರಣೆ ವೇಳೆ ಆರೋಪಿಗಳು ಸಂತೋಷ್ ಪದ್ಮಣ್ಣವರ ಪತ್ನಿ ಉಮಾಳ ಫೇಸ್ ಬುಕ್ ಸ್ನೇಹಿತರು ಎಂದು ಹೇಳಿದ್ದಾರೆ. ಶೋಭಿತ್ ಗೌಡಗೆ ಅಕ್ಟೋಬರ್.9 ರಂದು ಉಮಾ ಕರೆ ಮಾಡಿ ಕೆಲಸ ಮುಗಿಸಿದ್ದೇನೆ. ಆದರೂ ಧೈರ್ಯ ಸಾಲುತ್ತಿಲ್ಲ ಬಂದು ಸಹಾಯಮಾಡುವಂತೆ ಹೇಳಿದ್ದಳು. ಪತಿ ಸಂತೋಷ್ ಗೆ ನಿದ್ದೆ ಮಾತ್ರೆ ಕೊಟ್ಟು ಹಾಕಿ ಉಸಿರು ಗಟ್ಟಿಸಿ ಕೊಲೆ ಮಾಡಲು ಯತ್ನಿಸಿದರೂ ಸಂತೋಷ್ ಮೃತಪಟ್ಟಿರಲ್ಲವಂತೆ.ಹಾಗಾಗಿ ಸ್ನೇಹಿತರ ಸಹಾಯರಿಂದ ಉಮಾ, ಪತಿ ಸಂತೋಷ್ ನನ್ನು ಕೊಲೆ ಮಾಡಿರುವುದಾಗಿ ಬಂಧಿತ ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಕರಣದ ಪ್ರಮುಖ ಆರೋಪಿ ಉಮಾ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಉದ್ಯಮಿಯಾಗಿದ್ದ ಸಂತೋಷ್ ಪದ್ಮಣ್ಣವರ್ ಸಾವಿನ ಬಗ್ಗೆ ಮಗಳು ಸಂಜನಾ ಅನುಮಾನಗೊಂಡು ತಾಯಿ ಹಾಗೂ ಕುಟುಂಬದವರ ವಿರುದ್ಧವೇ ಪೊಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

For Latest News Updates, Join Our Whatsapp Community🚩
RELATED ARTICLES

Most Popular