ಬೆಂಗಳೂರಿನಲ್ಲಿ ಮಳೆ ಅನಿರೀಕ್ಷಿತ: ಮಳೆ ನೀರು ವಾಪಾಸ್ ಆಕಾಶಕ್ಕೆ ಕಳಿಸೋಕೆ ಆಗುತ್ತಾ? ಎಂದ ಗೃಹ ಸಚಿವ ಪರಮೇಶ್ವರ್

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅವಾಂತರಗಳು ಸೃಷ್ಟಿಯಾಗಿದ್ದು, ಜನಜೀವನ ಅಯೋಮಯವಾಗಿದೆ. ಈ ನಡುವೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬೇಜವಾಬ್ದಾರಿ ಹೇಳಿಕೆ ನೀಡುವ ಮೂಲಕ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಬೆಂಗಳೂರಿನಲ್ಲಿ ಮಳೆ ಅನಿರೀಕ್ಷಿತ. ಇದು ನಮಗೂ ಅಶ್ಚರ್ಯ ತಂದಿದೆ. ಇಂತಹ ಮಳೆಯಲ್ಲಿ ಎಂಥಹ ಸಿಟಿಯದರೂ ಅಸ್ತವ್ಯಸ್ತವಾಗಿತ್ತೆ. ನ್ಯೂಯಾರ್ಕ್, ಲಂಡನ್ ನಲ್ಲಿ ಆಗಿಲ್ವಾ? ಎಂದು ಪ್ರಶ್ನಿಸಿದ್ದಾರೆ.

ಯಾವುದೇ ಸಿಟಿಯಾದರೂ ಅಷ್ಟೇ ಭಾರಿ ಮಳೆಯಾದರೆ ಅವಾಂತರ ಸೃಷ್ಟಿಯಾಗುತ್ತೆ. ಮಳೆ ನೀರನ್ನು ವಾಪಾಸ್ ಆಕಾಶಕ್ಕೆ ಕಳುಹಿಸಲು ಆಗುತ್ತಾ? ಎಂದು ಕೇಳಿದ್ದಾರೆ.

ಬೆಂಗಳೂರಿನಲ್ಲಿಯೂ ಮಳೆ ನೀರಿನಿಂದಾಗಿ ಸಮಸ್ಯೆಯಾಗಿದೆ. ಮಳೆ ಬಂದಾಗ ನೀರು ವಾಪಾಸ್ ಆಕಾಶಕ್ಕೆ ಕಳುಹಿಸಲು ಆಗಲ್ಲ. ಭೂಮಿ ಮೇಲೆ ಹರಿದು ಹೋಗಬೇಕು ಏನೂ ಮಾಡಲು ಆಗಲ್ಲ ಎಂದಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read