alex Certify BREAKING NEWS: ಭಾರತ-ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿ: ಮೊದಲ ದಿನದ ಆಟ ರದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಭಾರತ-ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿ: ಮೊದಲ ದಿನದ ಆಟ ರದ್ದು

ಬೆಂಗಳೂರು: ಭಾರತ-ನ್ಯೂಜಿಲ್ಯಾಂಡ್ ನಡುವಿನ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ದಿಯಾಗಿದ್ದು, ಮೊದಲ ದಿನದ ಆಟ ರದ್ದಾಗಿದೆ.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಇಂದಿನಿಂದ ಐದು ದಿನಗಳ ಕಾಲ ಭಾರತ-ನ್ಯೂಜಿಲ್ಯಾಂಡ್ ನಡುವೆ ಟೆಸ್ಟ್ ಪಂದ್ಯ ಆರಂಭವಾಗಬೇಕಿತ್ತು. ಆದರೆ ಮೊದಲ ದಿನದ ಆಟವೇ ರದ್ದಾಗಿದೆ. ಇದರಿಂದಾಗಿ ಸ್ಟೇಡಿಯಂ ಗೆ ಬಂದಿದ್ದ ಕ್ರಿಕೆಟ್ ಅಭಿಮಾನಿಗಳು ನಿರಾಶರಾಗಿ ವಾಪಾಸ್ ತೆರಳಿದ್ದಾರೆ.

ಬೆಂಗಳೂರಿನಲ್ಲಿ ಬಿಟ್ಟು ಬಿಡದೇ ಮಳೆಯಾಗುತ್ತಿದ್ದು, ಪಂದ್ಯ ಆರಂಭದಲ್ಲೇ ಅಡ್ಡಿಯುಂಟಾಗಿದೆ. ಬೆಳಿಗ್ಗೆ 9:30ಕ್ಕೆ ಆರಂಭವಾಗಬೇಕಿದ್ದ ಪಂದ್ಯಕ್ಕೆ ಮಳೆರಾಯ ತಡೆ ನೀಡಿದ್ದಾನೆ. ಲಂಚ್ ಬ್ರೇಕ್ ಮುಗಿದರೂ ಮಳೆ ನಿಂತಿಲ್ಲ. ಇದರಿಂದಾಗಿ ಭಾರತ-ನ್ಯೂಜಿಲ್ಯಾಂಡ್ ನಡುವಿನ ಮೊದಲ ದಿನದ ಆಟ ರದ್ದು ಪಡಿಸಲಾಗಿದೆ ಎಂದು ತಿಳಿದುಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...