ಲಲಿತ್ಪುರ: ತನ್ನ 10 ವರ್ಷದ ಮಗಳನ್ನು ಹಗ್ಗದಿಂದ ತಲೆಕೆಳಗಾಗಿ ನೇತುಹಾಕಿ ಥಳಿಸಿದ ಆರೋಪದ ಮೇಲೆ 45 ವರ್ಷದ ವ್ಯಕ್ತಿಯನ್ನು ಬಂಧಿಸಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಲಲಿತ್ಪುರದಲ್ಲಿ ಬೆಳಕಿಗೆ ಬಂದಿದೆ.
ಬಾರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಧಮ್ನಾ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಈ ಕೃತ್ಯದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪೊಲೀಸರು ಆರೋಪಿ ತಂದೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಧಮ್ನಾ ನಿವಾಸಿ ಗೋವಿಂದ್ ದಾಸ್ ರಾಯ್ಕ್ವಾರ್ ತನ್ನ ಮಗಳು ಸೋನಮ್ ಅವರ ಕಾಲುಗಳನ್ನು ಕಟ್ಟಿ ನೇತುಹಾಕಿ ಥಳಿಸಿದ್ದಾರೆ.ವೈರಲ್ ಆದ ವೀಡಿಯೊದಲ್ಲಿ, ತಂದೆ ತನ್ನ ಮಗಳನ್ನು ತಲೆಕೆಳಗಾಗಿ ನೇತು ಹಾಕಿರುವುದನ್ನು ನೋಡಬಹುದು. “ಅಪ್ಪಾ, ನನ್ನನ್ನು ದಯವಿಟ್ಟು ಬಿಡಿ” ಎಂದು ಅವಳು ಬೇಡಿಕೊಂಡರೂ ತಂದೆ ಮನಸ್ಸು ಕರಗಲಿಲ್ಲ. ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
#ललितपुर-कलयुगी पिता ने दुर्गा अष्टमी के दिन अपनी ही मासूम बेटी के साथ किया हैवानियत।दारू के नशे में धुत सनकी पिता ने मासूम के पैर बांधकर उल्टा लटकाया और जमकर पीटा ,वीडियो वॉयरल। केस दर्ज
थाना बार क्षेत्र के अंतर्गत धमना गाँव का मामला @Uppolice @lalitpurpolice #Lalitpur… pic.twitter.com/XUqNxp1fqQ— Global Bharat News (@Global__Bharat) October 12, 2024

