ಬೆಂಗಳೂರು: ವ್ಯಕ್ತಿಯೋರ್ವ ಪರ್ತಕರ್ತನ ಪತ್ನಿಗೆ ಆಸಿಡ್ ಹಾಕುವುದಾಗಿ ಬೆದರಿಕೆಯೊಡ್ಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂಧಿದೆ.
ನಿಕಿತ್ ಶೆಟ್ಟಿ ಎಂಬಾತ ಪತ್ರಕರ್ತ ಶಹಭಾಜ್ ಅನ್ಸರ್ ವರ ಪತ್ನಿಗೆ ಜೀವ ಬೆದರಿಕೆ ಹಾಕಿದ್ದಲ್ಲದೇ, ಆಸಿಡ್ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ನಿಕಿತ್ ಶೆಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾನೆ.
ಕಂಗಾಲಾಗಿರುವ ಪತ್ರಕರ್ತ ಹಾಗೂ ಶಹಬಾಜ್ ಅನ್ಸರ್, ಸಾಮಾಜಿಕ ಜಾಲತಾಣಗಳ ಮೂಲಕ ಡಿಸಿಪಿ ಹಾಗೂ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವರು, ಡಿಸಿಎಂ ಡಿಕೆ.ಶಿವಕುಮಾರ್ ಅವರಿಗೆ ಟ್ಯಾಕ್ ಮಾಡಿ ದೂರು ನೀಡಿದ್ದಾರೆ.
ಕರ್ನಾಟಕದ ಒಳ್ಳೆ ರೀತಿಯ ಬಟ್ಟೆ ತೊಟ್ಟುಕೊಳ್ಳುವಂತೆ ನಿನ್ನ ಹೆಮ್ಡತಿಗೆ ಹೇಳು. ಇಲ್ಲದಿದ್ದರೆ ನಾನು ಆಕೆ ಮುಖಕ್ಕೆ ಆಸಿಡ್ ಹಾಕುತ್ತೇನೆ ಎಂದು ನಿಖಿತ್ ಶೆಟ್ಟಿ ಇನ್ ಸ್ಟಾಗ್ರಾಂ ಮೂಲಕ ಶಭಾಜ್ ಗೆ ಬೆದರಿಕೆ ಹಾಕಿದ್ದಾನೆ.
ನಿಕಿತ್ ಶೆಟ್ಟಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲತಾಣ ಬಳಕೆದಾರರು ಕೂಡ ಆಗ್ರಹಿಸಿದ್ದಾರೆ.