HomeIndiaShocking News: ವಾಮಾಚಾರಕ್ಕೆ ಸ್ವಂತ ಮಗುವನ್ನೇ ಬಲಿ ಕೊಟ್ಟ ದಂಪತಿ

Shocking News: ವಾಮಾಚಾರಕ್ಕೆ ಸ್ವಂತ ಮಗುವನ್ನೇ ಬಲಿ ಕೊಟ್ಟ ದಂಪತಿ

ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯಲ್ಲಿ ಬುಧವಾರ ರಾತ್ರಿ ತಮ್ಮ ಒಂದು ತಿಂಗಳ ಹೆಣ್ಣು ಮಗುವನ್ನು ಬಲಿಕೊಟ್ಟ ಆರೋಪದಲ್ಲಿ ದಂಪತಿಯನ್ನು ಬಂಧಿಸಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ತನ್ನ ಪತ್ನಿಯ ಅನಾರೋಗ್ಯವನ್ನು ಗುಣಪಡಿಸಲು ಮೂಢನಂಬಿಕೆಯ ಈ ದಂಪತಿ ಸ್ವಯಂ ಘೋಷಿತ ತಂತ್ರಿ ಸಲಹೆಯಂತೆ ಮಗುವನ್ನು ಕೊಂದಿದ್ದಾರೆ.

ಮುಜಾಫರ್‌ನಗರ ಜಿಲ್ಲೆಯ ಭೋಪಾ ಪ್ರದೇಶದ ಬೆಲ್ಡಾ ಗ್ರಾಮದಲ್ಲಿ ಬುಧವಾರ ರಾತ್ರಿ ಈ ಭೀಕರ ಘಟನೆ ನಡೆದಿದೆ. ಹೆಣ್ಣು ಮಗು ನಾಪತ್ತೆಯಾಗಿದ್ದು, ನೆರೆಹೊರೆಯವರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಚಾರಣೆ ವೇಳೆ ಮಮತಾ ಮತ್ತು ಆಕೆಯ ಪತಿ ಗೋಪಾಲ್ ಕಶ್ಯಪ್ ತಮ್ಮ ಒಂದು ತಿಂಗಳ ಮಗಳನ್ನು ಬಲಿಕೊಟ್ಟಿರುವುದಾಗಿ ಒಪ್ಪಿಕೊಂಡಿದ್ದಾರೆ.

ಗ್ರಾಮದ ಸಮೀಪದ ಕಾಡಿನಲ್ಲಿ ಮೃತ ಮಗುವಿನ ಶವವನ್ನು ಬಚ್ಚಿಟ್ಟಿದ್ದು, ಪೊಲೀಸರು ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ತಮ್ಮ ಮಗುವಿನ ನರಬಲಿಗಾಗಿ ದಂಪತಿಗಳನ್ನು ಪ್ರೇರೇಪಿಸಿದ ತಂತ್ರಿಯನ್ನು ಹರೇಂದ್ರ ಎಂದು ಗುರುತಿಸಲಾಗಿದ್ದು, ಆತನನ್ನು ಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ.

For Latest News Updates, Join Our Whatsapp Community🚩
RELATED ARTICLES

Most Popular