alex Certify ಹೃದಯದ ಸಮಸ್ಯೆಯನ್ನು ಗುರುತಿಸಿ ವೃದ್ಧೆಯ ಜೀವ ಉಳಿಸಿದ ‌ʼಆಪಲ್ʼ ವಾಚ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೃದಯದ ಸಮಸ್ಯೆಯನ್ನು ಗುರುತಿಸಿ ವೃದ್ಧೆಯ ಜೀವ ಉಳಿಸಿದ ‌ʼಆಪಲ್ʼ ವಾಚ್….!

ಇಂದಿನ ತಾಂತ್ರಿಕತೆ ಮನುಷ್ಯರಿಗೆ ವರದಾನವಾಗಿ ಪರಿಣಮಿಸಿದೆ. ಆರೋಗ್ಯ ಸಂಬಂಧಿ ಸಮಸ್ಯೆಗಳನ್ನೂ ಸಹ ಗುರುತಿಸುವಷ್ಟು ತಂತ್ರಜ್ಞಾನ ಬೆಳೆದಿದ್ದು, ವೈದ್ಯರ ಬಳಿ ಹೋಗದೆಯೇ ಸಮಸ್ಯೆಯನ್ನು ಗುರುತಿಸಬಹುದಾಗಿದೆ. ಈ ವಿಚಾರದಲ್ಲಿ ಆಪಲ್‌ ವಾಚ್‌ ಮುಂಚೂಣಿಯಲ್ಲಿದೆ.

ಈ ಹಿಂದೆ ಹಲವು ಪ್ರಕರಣಗಳಲ್ಲಿ ಕೈಗೆ ಧರಿಸಿರುವ ಆಪಲ್‌ ವಾಚ್‌ ದೇಹದಲ್ಲಿನ ಏರುಪೇರುಗಳನ್ನು ಸಕಾಲದಲ್ಲಿ ಗುರುತಿಸಿ ಹಲವರ ಜೀವ ಉಳಿಸಿರುವ ಸಾಕಷ್ಟು ಘಟನೆಗಳು ನಡೆದಿದ್ದು, ಇದಕ್ಕೆ ಈಗ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ.

ಆಪಲ್‌ ವಾಚ್‌ ಧರಿಸಿದ್ದ ವೃದ್ಧೆಯೊಬ್ಬರ ಹೃದಯ ಬಡಿತದಲ್ಲಿನ ವ್ಯತ್ಯಾಸವನ್ನು ತಕ್ಷಣವೇ ಗುರುತಿಸಿದ ಆಪಲ್‌ ವಾಚ್‌, ಈ ಕುರಿತು ಸೂಚನೆ ನೀಡಿದ್ದು, ಕುಟುಂಬ ಸದಸ್ಯರು ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ ಕಾರಣ ಜೀವಾಪಾಯ ತಪ್ಪಿದೆ. ಈ ವಿಷಯವನ್ನು ಆಕೆಯ ಮೊಮ್ಮಗ Nikias Molina ಸಾಮಾಜಿಕ ಜಾಲತಾಣ ʼಎಕ್ಸ್‌ʼ ನಲ್ಲಿ ಹಂಚಿಕೊಂಡಿದ್ದಾರೆ.

ಇದಕ್ಕೆ ಸಾಕಷ್ಟು ಮಂದಿ ಪ್ರತಿಕ್ರಿಯಿಸಿ ತಮಗಾದ ಹಾಗೂ ತಮ್ಮ ಕುಟುಂಬಸ್ಥರು, ಸ್ನೇಹಿತರ ಅನುಭವಗಳನ್ನು ಹಂಚಿಕೊಂಡಿದ್ದಾರೆ. Nikias Molina ರವರ ಪೋಸ್ಟ್‌ ಗೆ ಪ್ರತಿಕ್ರಿಯಿಸಿರುವ ವ್ಯಕ್ತಿಯೊಬ್ಬರು ಆಪಲ್‌ ವಾಚ್‌ ಧರಿಸಿದ್ದ ತಮ್ಮ ಸ್ನೇಹಿತ ಕಾರಿನಲ್ಲಿ ಬರುವಾಗ ಅಸ್ವಸ್ಥಗೊಂಡಿದ್ದು, ಇದನ್ನು ಗುರುತಿಸಿದ ಆಪಲ್‌ ವಾಚ್‌, ಆತನ ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ತುರ್ತು ಸಹಾಯವಾಣಿಗೆ ಸಂದೇಶ ರವಾನಿಸಿ ಆತನ ಪ್ರಾಣ ಉಳಿಯಲು ನೆರವಾಯಿತು ಎಂದಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...