HomeKarnatakaಇದಪ್ಪಾ ಅದೃಷ್ಟ ಅಂದ್ರೆ..! 25 ಕೋಟಿ ಬಂಪರ್ ಲಾಟರಿ ಗೆದ್ದ ಮಂಡ್ಯದ ಬೈಕ್ ಮೆಕ್ಯಾನಿಕ್..!

ಇದಪ್ಪಾ ಅದೃಷ್ಟ ಅಂದ್ರೆ..! 25 ಕೋಟಿ ಬಂಪರ್ ಲಾಟರಿ ಗೆದ್ದ ಮಂಡ್ಯದ ಬೈಕ್ ಮೆಕ್ಯಾನಿಕ್..!

ಬೈಕ್ ಮೆಕ್ಯಾನಿಕ್ ಓರ್ವ ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾಗಿದ್ದಾನೆ. ಒಂದು ದಿನದ ಹಿಂದೆ ಆತ ಖರೀದಿಸಿದ ಲಾಟರಿ ಟಿಕೆಟ್ ಗೆ ಬರೊಬ್ಬರಿ 25 ಕೋಟಿ ರೂಪಾಯಿ ಬಹುಮಾನ ಬಂದಿದೆ. ಕೇರಳ ಸರಕಾರದ ಓಣಂ ಲಾಟರಿಯಲ್ಲಿ ಈತ ಈ ಭರ್ಜರಿ ಮೊತ್ತವನ್ನುಗೆದ್ದಿದ್ದಾನೆ.

ಅಲ್ತಾಫ್ ಪಟ್ಟಣದಲ್ಲಿ ಸ್ಕೂಟರ್ ಮೆಕ್ಯಾನಿಕ್ ನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇತ್ತೀಚೇಗೆ ಕೇರಳಕ್ಕೆ ಹೋಗಿದ್ದ ಸಂದರ್ಭದಲ್ಲಿ 500 ರೂ ಕೊಟ್ಟು ಲಾಟರಿ ಖರೀದಿ ಮಾಡಿದ್ದರು. ಇವರಿಗೆ 25 ಕೋಟಿ ಬಂಪರ್ ಲಾಟರಿ ಹೊಡೆದಿದ್ದು, , ಟ್ಯಾಕ್ಸ್ ಎಲ್ಲಾ ಕಳೆದು 17.5 ಕೋಟಿ ರೂಪಾಯಿ ಅಲ್ತಾಫ್ ಗೆ ಸಿಗಲಿದೆಯಂತೆ.

ಸ್ಕೂಟರ್ ಮೆಕ್ಯಾನಿಕ್ ಕೆಲಸ ಮಾಡಿಕೊಂಡು ಬಹಳ ಕಷ್ಟಪಟ್ಟು ಜೀವನ ಸಾಗಿಸುತ್ತಿದ್ದ ಅಲ್ತಾಫ್ ಗೆ ಲಾಟರಿ ವರದಾನವಾಗಿದ್ದು, ಅವರ ಸಂತೋಷಕ್ಕೆ ಪಾರವೇ ಇಲ್ಲ.ಕೇರಳಕ್ಕೆ ಹೋಗಿ ಲಾಟರಿ ಹಣ ಪಡೆಯುವುದಾಗಿ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular