HomeAutoಲೆಜೆಂಡ್ಸ್ ಎಂದಿಗೂ ಸಾಯುವುದಿಲ್ಲ: ರತನ್ ಟಾಟಾ ನಿಧನಕ್ಕೆ ಕಂಬನಿ ಮಿಡಿದ ಆನಂದ್ ಮಹೀಂದ್ರಾ

ಲೆಜೆಂಡ್ಸ್ ಎಂದಿಗೂ ಸಾಯುವುದಿಲ್ಲ: ರತನ್ ಟಾಟಾ ನಿಧನಕ್ಕೆ ಕಂಬನಿ ಮಿಡಿದ ಆನಂದ್ ಮಹೀಂದ್ರಾ

ರತನ್ ಟಾಟಾ ಅವರ ನಿಧನಕ್ಕೆ ಮಹೀಂದ್ರಾ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರಾ ಸಂತಾಪ ವ್ಯಕ್ತಪಡಿಸಿದ್ದು, ರತನ್ ಟಾಟಾ ಅವರ ಅನುಪಸ್ಥಿತಿಯನ್ನು ಒಪ್ಪಿಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಭಾರತದ ಆರ್ಥಿಕತೆಯು ಐತಿಹಾಸಿಕ ಪ್ರಗತಿಯ ತುದಿಯಲ್ಲಿ ನಿಂತಿದೆ. ರತನ್ ಟಾಟಾ ಅವರ ಜೀವನ ಮತ್ತು ಕೆಲಸ ನಾವು ಈ ಸ್ಥಾನದಲ್ಲಿರುವುದಕ್ಕೆ ಹೆಚ್ಚಿನ ಸಂಬಂಧವನ್ನು ಹೊಂದಿದೆ. ಆದ್ದರಿಂದ, ಅವರ ಮಾರ್ಗದರ್ಶನ ಈ ಸಮಯದಲ್ಲಿ ಅತ್ಯಮೂಲ್ಯವಾಗಿರುತ್ತಿತ್ತು. ಏಕೆಂದರೆ ಅವರ ಸಲಹೆ, ಮಾರ್ಗದರ್ಶನ, ಉದಾಹರಣೆಯನ್ನು ಅನುಕರಿಸಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.

ಆರ್ಥಿಕ ಸಂಪತ್ತು ಮತ್ತು ಯಶಸ್ಸನ್ನು ಸೇವೆಗೆ ಬಳಸಿದಾಗ ಹೆಚ್ಚು ಉಪಯುಕ್ತವಾಗುತ್ತದೆ. ಗುಡ್ ಬೈ. ಮಿಸ್ಟರ್ ಟಾಟಾ, ನೀವೆಂದಿಗೂ ಮರೆಯಾಗುವುದಿಲ್ಲ. ಏಕೆಂದರೆ ಲೆಜೆಂಡ್ಸ್ ಎಂದಿಗೂ ಸಾಯುವುದಿಲ್ಲ …ಓಂ ಶಾಂತಿ ಎಂದು ಆನಂದ್ ಮಹಿಂದ್ರಾ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular