HomeIndiaಕೀಟನಾಶಕ ಪತ್ತೆ ಹಿನ್ನಲೆ ಗೊಬ್ಬರವಾಗಲಿದೆ 5.5 ಕೋಟಿ ರೂ. ಮೌಲ್ಯದ ಶಬರಿಮಲೆ ಅರವಣ ಪ್ರಸಾದ

ಕೀಟನಾಶಕ ಪತ್ತೆ ಹಿನ್ನಲೆ ಗೊಬ್ಬರವಾಗಲಿದೆ 5.5 ಕೋಟಿ ರೂ. ಮೌಲ್ಯದ ಶಬರಿಮಲೆ ಅರವಣ ಪ್ರಸಾದ

ಶಬರಿಮಲೆ ಎಂದಾಕ್ಷಣ ನೆನಪಿಗೆ ಬರುವುದು ಅರವಣ ಪ್ರಸಾದ. ಅಯ್ಯಪ್ಪ ಸ್ವಾಮಿಯ ಚಿತ್ರವಿರುವ ಸಣ್ಣ ತವರದ ಪಾತ್ರೆಯಲ್ಲಿ ಈ ಪ್ರಸಾದವನ್ನು ಶಬರಿಮಲೆಯಲ್ಲಿ ಅಯ್ಯಪ್ಪನ ಭಕ್ತರಿಗೆ ವಿತರಿಸಲಾಗುತ್ತದೆ. ಆದರೆ, ಸುಮಾರು ಒಂದು ವರ್ಷದಿಂದ ಸಂಗ್ರಹಿಸಿಟ್ಟಿದ್ದ ಅರವಣ ಪ್ರಸಾದದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕಗಳಿವೆ ಎಂದು 2023ರ ಜನವರಿಯಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

ಆದರೆ, ಅರ್ಜಿದಾರರು ಈ ಬಗ್ಗೆ ಯಾವುದೇ ಸಾಕ್ಷ್ಯವನ್ನು ಸಲ್ಲಿಸದ ಕಾರಣ, ಅದನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಆದರೆ, ಟ್ರಾವಂಕೋರ್ ದೇವಸ್ವಂ ಮಂಡಳಿಯು ಸುಮಾರು 6.65 ಲಕ್ಷ ಟಿನ್ ಕಂಟೈನರ್‌ಗಳಲ್ಲಿನ ಅರಾವಣ ಪ್ರಸಾದವನ್ನು ದೀರ್ಘಾವಧಿಯ ಸಂಗ್ರಹಣೆ ಕಾರಣದಿಂದ ಭಕ್ತರಿಗೆ ವಿತರಿಸದಿರಲು ನಿರ್ಧರಿಸಿದೆ. ಮೊದಲಿಗೆ ಪ್ರಸಾದವನ್ನು ಕಾಡಿನಲ್ಲಿ ಎಸೆಯಲು ಪ್ರಸ್ತಾಪಿಸಲಾಯಿತು.

ಆದರೆ ಪ್ರಸಾದವನ್ನು ಕಾಡಿನಲ್ಲಿ ಎಸೆಯುವ ಬದಲು ವೈಜ್ಞಾನಿಕ ವಿಧಾನದ ಮೂಲಕ ಮರುಬಳಕೆ ಮಾಡುವುದು ಉತ್ತಮ ಎಂದು ಅಂತಿಮವಾಗಿ ನಿರ್ಧರಿಸಲಾಯಿತು. ಇದಕ್ಕಾಗಿ ಆಸಕ್ತ ಕಂಪನಿಗಳಿಂದ ಟೆಂಡರ್ ಕರೆಯಲಾಗಿದೆ. ಕೇರಳದ ಕಂಪನಿ ಇಂಡಿಯನ್ ಸೆಂಟ್ರಿಫ್ಯೂಜ್ ಎಂಜಿನಿಯರಿಂಗ್ ಸೊಲ್ಯೂಷನ್ಸ್(ಐಸಿಇಎಸ್) ಈ ಬಿಡ್ ಅನ್ನು ಗೆದ್ದಿದೆ. 5.50 ಕೋಟಿ ಮೌಲ್ಯದ ಅರವಣ ಪ್ರಸಾದವನ್ನು ಗೊಬ್ಬರವಾಗಿ ಪರಿವರ್ತಿಸಿ ರೈತರಿಗೆ ಬಳಸಲಾಗುವುದು ಎಂದು ಐಸಿಇಎಸ್ ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಈ ಕಂಪನಿಯು 1.15 ಕೋಟಿ ರೂ. ತೆಗೆದುಕೊಳ್ಳುತ್ತಿದೆ. ಮೊದಲು 6.65 ಲಕ್ಷ ಕಂಟೈನರ್‌ಗಳಲ್ಲಿ ಅರವಣ ಪ್ರಸಾದವನ್ನು ಕೊಟ್ಟಾಯಂನಲ್ಲಿರುವ ತಮ್ಮ ಕಚೇರಿಗೆ ಮತ್ತು ಅಲ್ಲಿಂದ ಹೈದರಾಬಾದ್‌ನಲ್ಲಿರುವ ತಮ್ಮ ಸಂಸ್ಕರಣಾ ಘಟಕಕ್ಕೆ ಸ್ಥಳಾಂತರಿಸುವುದಾಗಿ ಐಸಿಇಎಸ್ ತಿಳಿಸಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular