HomeKarnatakaBIG NEWS: ಪರಪ್ಪನ ಅಗ್ರಹಾರ ಜೈಲಿನ ಮೇಲೆ ಪೊಲೀಸರ ದಾಳಿ ಪ್ರಕರಣ: ಮಾಹಿತಿ ಕೇಳಿದ ಗುಪ್ತಚರ...

BIG NEWS: ಪರಪ್ಪನ ಅಗ್ರಹಾರ ಜೈಲಿನ ಮೇಲೆ ಪೊಲೀಸರ ದಾಳಿ ಪ್ರಕರಣ: ಮಾಹಿತಿ ಕೇಳಿದ ಗುಪ್ತಚರ ಇಲಾಖೆ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ಮೇಲೆ ಪೊಲೀಸರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಪ್ತಚರ ಇಲಾಖೆ ಅಧಿಕಾರಿಗಳು ಮಾಹಿತಿ ಕೇಳಿದ್ದಾರೆ.

ಬೆಂಗಳೂರು ಆಗ್ನೇಯ ವಿಭಾಗ ಪೊಲೀಸರಿಂದ ಐಬಿ ಮಾಹಿತಿ ಕೇಳಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಅನೇಕ ಶಂಕಿತ ಉಗ್ರರು ಇದ್ದಾರೆ. ಜೈಲಿನ ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಐಬಿ ಅಲರ್ಟ್ ಆಗಿದ್ದು, ಪೊಲೀಸರು ನಡೆಸಿರುವ ದಾಳಿಯ ಬಗ್ಗೆ ಮಾಹಿತಿ ಕೇಳಿದೆ.

ದಾಳಿ ವೇಳೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಎಷ್ಟು ಮೊಬೈಲ್, ಸಿಮ್ ಕಾರ್ಡ್ ಗಳು ಪತ್ತೆಯಾಗಿವೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular