ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರಿಗೆ ಭಾರಿ ಹಿನ್ನಡೆಯಾಗಿದ್ದು, ಒಂದೇ ದಿನದಲ್ಲಿ ಸಂಘಟಿತ ಸಂಸ್ಥೆಯು 77,606 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದೆ.
ವರದಿಗಳ ಪ್ರಕಾರ, ತೈಲ, ನೈಸರ್ಗಿಕ ಅನಿಲ, ಎಫ್‌ಎಂಸಿಜಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಅಸ್ತಿತ್ವವನ್ನು ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳಲ್ಲಿ ಗುರುವಾರ ಕುಸಿತ ಕಂಡಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಸುಮಾರು 4 ಪ್ರತಿಶತದಷ್ಟು ಕುಸಿದಿದೆ, ಕಂಪನಿಯ ಮಾರುಕಟ್ಟೆ ಮೌಲ್ಯದಿಂದ 77,606.98 ಕೋಟಿ ರೂ.ಗಳ ಇಳಿಕೆ ಆಗಿದ್ದು, ಈಗ 19,04,762.79 ಕೋಟಿ ರೂ. ಆಗಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನಿಂದ ಭಾರತದ ಷೇರು ಮಾರುಕಟ್ಟೆ ತೈಲ ಮತ್ತು ಅನಿಲ ಉದ್ಯಮಗಳ ಮೇಲೆ ಪರಿಣಾಮ ಉಂಟಾಗಿದೆ.
ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟಿನಿಂದ ಷೇರುಪೇಟೆಯ ಮೇಲೆ ಭಾರಿ ಪರಿಣಾಮ ಉಂಟಾಗಿದ್ದು, ಮುಂಬೈ ಷೇರು ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 1,769.19 ಅಂಕ ಕುಸಿತ ಕಂಡಿದೆ. ರಾಷ್ಟ್ರೀಯ ಷೇರು ಸಂವೇದಿ ಸೂಚಂಕ ನಿಫ್ಟಿ ಕೂಡ ಶೇಕಡ 2ರಷ್ಟು ಇಳಿಕೆಯಾಗಿದ್ದು, ಇದರಿಂದ ಹೂಡಿಕೆದಾರರ ಸಂಪತ್ತು ಒಂದೇ ದಿನ 9.78 ಲಕ್ಷ ಕೋಟಿ ರೂ.ನಷ್ಟು ಕರಗಿದೆ. ಶುದ್ಧ ಚಿನ್ನದ ದರ 79,870 ರೂಪಾಯಿಗೆ ಏರಿಕೆಯಾಗಿದೆ.