ಭೀಕರ ಪ್ರವಾದಲ್ಲಿ ಸಿಲುಕಿರುವ ಜನರನ್ನು ರಕ್ಷಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಸೇನಾ ಹೆಲಿಕಾಪ್ಟರ್ ಪ್ರವಾಹದ ನೀರಿನಲ್ಲಿಯೇ ತುರ್ತು ಭೂಸ್ಪರ್ಶವಾದ ಘಟನೆ ಬಿಹಾರದಲ್ಲಿ ನಡೆದಿದೆ.
ಪ್ರವಾಹ ಸಂತ್ರಸ್ತರನ್ನು ರಕ್ಷಿಸಲು ಸೇನಾ ಹೆಲಿಕಾಪ್ಟರ್ ಮೂಲಕ ಸ್ಥಳಾಂತರಿಸಲಾಗುತ್ತಿತ್ತು. ಈ ವೇಳೆ ಹೆಲಿಕಾಪ್ಟರ್ ಎಂಜಿನ್ ವೈಫಲ್ಯವಾಗಿದ್ದು, ಪ್ರವಾಹದ ನೀರಿನಲ್ಲಿಯೇ ತುರ್ತು ಭೂಸ್ಪರ್ಶ ಮಾಡಲಾಗಿದೆ. ತುರ್ತು ಭೂಸ್ಪರ್ಶವಾಗುತ್ತಿದ್ದಂತೆ ಹೆಲಿಕಾಪ್ಟರ್ ನ ಒಂದು ಭಾಗ ಪ್ರವಾಹದ ನೀರಿನಲ್ಲಿ ಮುಳುಗಿದೆ.
ಹೆಲಿಕಾಪ್ಟರ್ ನಲ್ಲಿ ಇಬ್ಬರು ಅಧಿಕಾರಿಗಳು ಸೇರಿದಂತೆ ನಾಲ್ವರು ಐಎಎಫ್ ಸಿಬ್ಬಂದಿಗಳಿದ್ದರು. ಸದ್ಯ ಎಲ್ಲರನ್ನೂ ರಕ್ಷಿಸಲಾಗಿದೆ ಎಂದು ತಿಳಿದುಬಂದುದೆ. ಪೈಲಟ್ ಬುದ್ಧಿವಂತಿಕೆಯಿಂದಾಗಿ ಅನಾಹುತ ತಪ್ಪಿದೆ ಎಂದು ವಿಪತ್ತು ನಿರ್ವಹಣಾ ಖಾಲೆ ಅಧಿಕಾರಿ ತಿಳಿಸಿದ್ದಾರೆ.