ಬೆಂಗಳೂರು: ರಾಮಾರೂಢ ಮಠದ ಸ್ವಾಮೀಜಿ ಪರಮರಾಮಾರೂಢರಿಗೆ ಒಂದು ಕೋಟಿ ರೂಪಾಯಿ ವಂಚಿಸಿದ್ದ ಜೆಡಿಎಸ್ ಮುಖಂಡ ಪ್ರಕಾಶ್ ಮುಧೋಳ, ಸಚಿವ ಆರ್,ಬಿ.ತಿಮ್ಮಾಪುರ ಅವರ ಹೆಸರಲ್ಲಿಯೂ ಮೋಸ ಮಾಡಿದ್ದನಂತೆ ಈ ಬಗ್ಗೆ ಸ್ವತಃ ಸಚಿವರು ಮಾಹಿತಿ ಬಿಚ್ಚಿಟ್ಟಿದ್ದಾರೆ.
2018ರಲ್ಲಿ ನನ್ನ ಸಹೋದರಿಗೆ ಕಾರು ಕೊಡಿಸಬೇಕು ಹಾಗಾಗಿ ಹಣ ಬೇಕೆಂದು ಬ್ಯಾಂಕ್ ಮ್ಯಾನೇಜರ್ ಬಳಿ ಹಣ ವಸೂಲಿ ಮಾಡಿದ್ದಾನೆ. ಅಷ್ಟೇ ಅಲ್ಲ, ಮಾಜಿ ಸಚಿವ ಕೆ.ಎಸ್.ಈಸ್ವರಪ್ಪ ಸಹೋದರನೆಂದು ಹೇಳಿ ಬಾದಾಮಿ ಮಾಜಿ ಶಾಸಕ ಬಿ.ಬಿ.ಚಿಮನಕಟ್ಟಿ ಹೆಸರಲ್ಲೂ ಆರೋಪಿ ದೋಖಾ ಮಾಡಿದ್ದಾನೆ.
ಅಷ್ಟೇ ಅಲ್ಲ ಹಾಲಿನ ಪುಡಿಯಲ್ಲಿ ಯೂರಿಯಾ ಮಿಕ್ಸ್ ಮಾಡಿದ್ದ ಪ್ರಕರಣದಲ್ಲಿಯೂ ಭಾಗಿಯಾಗಿದ್ದ. ಈ ಹಿಂದೆ ಜಗದೀಶ್ ಶೆಟ್ಟರ್ ಹೆಸರಲ್ಲಿಯೂ ಬಾಗಲಕೋಟೆಯ ಒಂದು ಸಿಮೆಂಟ್ ಫ್ಯಾಕ್ಟರಿಗೆ ಹೋಗಿದ್ದ. ಅಲ್ಲಿ ಶೆಟ್ಟರ್ ಹೇಳಿದ್ದಾರೆ ಎಂದು 25 ಲಕ್ಷ ರೂಪಾಯಿ ನೀಡಬೇಕಂತೆ ಎಂದು ಫ್ಯಾಕ್ಟರಿ ಆಡಳಿತ ಮಂಡಳಿಗೆ ಹೇಳಿದ್ದ . ಸಿಮೆಂಟ್ ಫ್ಯಾಕ್ಟರಿಯವರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿತ್ತು.
2019ರ ವೇಳೆ ಪ್ರವಾಹದ ಸಂದರ್ಭದಲ್ಲಿ ಸಂತ್ರಸ್ತರಿಗೆ ತಂದಿದ್ದ ಅಕ್ಕಿಯನ್ನೂ ಕಳ್ಳತನ ಮಾಡಿದ್ದ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಪ್ರಕಾಶ್ ಮುದೋಳನ ವಂಚನೆ ಕಥೆ ಬಿಚ್ಚಿಟ್ಟಿದ್ದಾರೆ.