ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಅಮಿತಾ ಬಚ್ಚನ್ ಅಭಿನಯಿಸಿರುವ ‘ವೆಟ್ಟಯ್ಯನ್’ ಇದೇ ಅಕ್ಟೋಬರ್ 10ರಂದು ತೆರೆ ಮೇಲೆ ಬರಲು ಸಜ್ಜಾಗಿದೆ. ಆಕ್ಷನ್ ಡ್ರಾಮಾ ಕಥಾಧಾರಿತ ಈ ಚಿತ್ರವನ್ನು ಟಿಜೆ ಜ್ಞಾನವೇಲ್ ನಿರ್ದೇಶಿಸಿದ್ದು, ತಮಿಳು ಸೇರಿದಂತೆ ಕನ್ನಡ, ತೆಲುಗು, ಹಾಗೂ ಹಿಂದಿ ಭಾಷೆಯಲ್ಲಿ ಭಾಷೆಯಲ್ಲಿ ಬಿಡುಗಡೆಯಾಗಲಿದೆ.
ಈ ಚಿತ್ರವನ್ನು ಲೈಕಾ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಸುಭಾಸ್ಕರನ್ ಅಲ್ಲಿರಾಜ ನಿರ್ಮಾಣ ಮಾಡಿದ್ದು, ರಜನಿಕಾಂತ್ ಹಾಗೂ ಅಮಿತಾ ಬಚ್ಚನ್ ಸೇರಿದಂತೆ ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್, ದುಶಾರ ವಿಜಯನ್, ರೋಹಿಣಿ, ಕಿಶೋರ್, ರಕ್ಷಣ್, ಜಿಎಂ ಸುಂದರ್, ಶಾಜಿ ಚೆನ್, ಬಣ್ಣ ಹಚ್ಚಿದ್ದಾರೆ. ಅನಿರುದ್ಧ ರವಿಚಂದರ್ ಸಂಗೀತ ಸಂಯೋಜನೆ ನೀಡಿದ್ದು, ಫಿಲೋಮಿನ್ ರಾಜ್ ಅವರ ಸಂಕಲನ ಹಾಗೂ ಎಸ್ ಆರ್ ಕತೀರ್ ಛಾಯಾಗ್ರಹಣವಿದೆ. ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 170ನೇ ಸಿನಿಮಾ ಎಂದು ಹೇಳಲಾಗಿದೆ.