alex Certify ಅಪರೂಪದ ಔದಾರ್ಯ ತೋರಿದ ರೈತ ದಂಪತಿ: ಪುತ್ರನ ನೆನಪಲ್ಲಿ 1 ಕೋಟಿ ರೂ. ಮೌಲ್ಯದ ಭೂಮಿ ದಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪರೂಪದ ಔದಾರ್ಯ ತೋರಿದ ರೈತ ದಂಪತಿ: ಪುತ್ರನ ನೆನಪಲ್ಲಿ 1 ಕೋಟಿ ರೂ. ಮೌಲ್ಯದ ಭೂಮಿ ದಾನ

ಹೈದರಾಬಾದ್: ಆಸ್ತಿ, ಜಮೀನು ವಿವಾದದಿಂದ ಕುಟುಂಬಗಳು ಛಿದ್ರವಾಗಿರುವ ಸಂದರ್ಭದಲ್ಲಿ ತೆಲಂಗಾಣದ ಕರೀಂನಗರ ಜಿಲ್ಲೆಯ ರೈತ ದಂಪತಿಗಳು ಜಮೀನನ್ನೇ ಉಡುಗೊರೆ ನೀಡುವ ಮೂಲಕ ಅಪರೂಪದ ಔದಾರ್ಯವನ್ನು ಪ್ರದರ್ಶಿಸಿದ್ದಾರೆ. 20 ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟ ತಮ್ಮ ಕಿರಿಯ ಮಗನ ನೆನಪಿಗಾಗಿ ಅವರ 3.18 ಎಕರೆ ಆಸ್ತಿಯ ಒಂದು ಭಾಗವನ್ನು ಸ್ಥಳೀಯ ಗ್ರಾಮ ಪಂಚಾಯಿತಿಗೆ ದಾನವಾಗಿ ನೀಡಿದ್ದಾರೆ.

ನುನುಗೊಂಡ ಲಕ್ಷ್ಮಯ್ಯ ಮತ್ತು ರಾಮವ್ವ ಅವರು ತಮ್ಮ ಇಬ್ಬರು ಹಿರಿಯ ಮಕ್ಕಳೊಂದಿಗೆ ಕಳೆದ ವಾರ ರಾಜ್ಯ ಸರಪಂಚರ ಸಂಘದ ಅಧ್ಯಕ್ಷ ಉಪ್ಪಳ ಅಂಜನಿಪ್ರಸಾದ್ ಅವರಿಗೆ 1.06 ಎಕರೆ ಅಳತೆಯ ಜಮೀನಿನ ಮಾಲೀಕತ್ವದ ದಾಖಲೆಗಳನ್ನು ಹಸ್ತಾಂತರಿಸಿದರು. 3.18 ಎಕರೆಯಲ್ಲಿ ಮೃತ ಪುತ್ರ ಪ್ರಭಾಕರ್ ಅವರ ಪಾಲಿನ 1.06 ಎಕರೆ ದಾನವಾಗಿ ನೀಡಿದ್ದು, ಸದ್ಯ ಮಾರುಕಟ್ಟೆಯಲ್ಲಿ 1 ಕೋಟಿ ರೂ. ಮೌಲ್ಯ ಹೊಂದಿದೆ.

ಕುಟುಂಬವು ರಾಮಡುಗು ಮಂಡಲದ ಗೋಲಿರಾಮಯ್ಯಪಲ್ಲಿ ಗ್ರಾಮದ ನುನುಗೊಂಡಪಲ್ಲಿಯಲ್ಲಿ ನೆಲೆಸಿದೆ. ಈ ಭೂಮಿಯನ್ನು ಸ್ಥಳೀಯ ಜನರು ಮತ್ತು ಗ್ರಾಮದ ಅನುಕೂಲಕ್ಕಾಗಿ ಬಳಸಬೇಕೆಂದು ನಾವು ಬಯಸುತ್ತೇವೆ ಎಂದು ಮೂವರು ಸಹೋದರರಲ್ಲಿ ಹಿರಿಯ ಮಲ್ಲಯ್ಯ ಸುದ್ದಿಗಾರರಿಗೆ ತಿಳಿಸಿದರು.

ಕುಟುಂಬಕ್ಕೆ ಕೃತಜ್ಞತೆ ಸಲ್ಲಿಸಿದ ಗ್ರಾಮಸ್ಥರು ದಾನವಾಗಿ ನೀಡಿದ ಜಮೀನಿನಲ್ಲಿ ಪ್ರಭಾಕರ್ ಅವರ ಪ್ರತಿಮೆಯನ್ನು ನಿರ್ಮಿಸಿ ಈ ಜಮೀನನ್ನು ಗ್ರಾಮದ ಹಿತದೃಷ್ಟಿಯಿಂದ ಬಳಸುವುದಾಗಿ ಕುಟುಂಬಕ್ಕೆ ಭರವಸೆ ನೀಡಿದ್ದಾರೆ.

ಪ್ರಭಾಕರ್ 27 ವರ್ಷದವರಾಗಿದ್ದಾಗ 2004ರಲ್ಲಿ ಅಪಘಾತ ಸಂಭವಿಸಿ ಮೃತಪಟ್ಟಿದ್ದರು. ತಮ್ಮ ಮಗನಿಗೆ ಸೇರಿದ್ದ ಭೂಮಿ ಒಳ್ಳೆಯ ಉದ್ದೇಶಕ್ಕೆ ಮತ್ತು ಗ್ರಾಮಕ್ಕೆ ಅನುಕೂಲವಾಗಲಿ ಎಂದು ದಾನ ಮಾಡಿದ್ದಾರೆ. ನುನುಗೊಂಡಪಲ್ಲಿ ಗ್ರಾಮಸ್ಥರು ಲಕ್ಷ್ಮಯ್ಯ ಮತ್ತು ರಾಮವ್ವ ಅವರನ್ನು ಸನ್ಮಾನಿಸಿ, ಅವರ ಔದಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...