HomeCrimeVIDEO | ಮದುವೆಯಾಗಿದ್ದ ಮಾಜಿ ಪ್ರೇಯಸಿ ಮನೆಗೆ ಬಂದ ಗೆಳೆಯ; ಮುಂದಾಗಿದ್ದು ಡಿಶುಂ ಡಿಶುಂ

VIDEO | ಮದುವೆಯಾಗಿದ್ದ ಮಾಜಿ ಪ್ರೇಯಸಿ ಮನೆಗೆ ಬಂದ ಗೆಳೆಯ; ಮುಂದಾಗಿದ್ದು ಡಿಶುಂ ಡಿಶುಂ

ಮದುವೆಯಾಗಿದ್ದ ಮಾಜಿ ಪ್ರೇಯಸಿ ಮನೆಗೆ ಬಂದ ಯುವಕನನ್ನು ಹಿಡಿದು ಹಿಗ್ಗಮುಗ್ಗಾ ಥಳಿಸಿರುವ ಘಟನೆ ಉತ್ತರಪ್ರದೇಶ ಜಿಲ್ಲೆಯ ಅಮೇಥಿಯಲ್ಲಿ ವರದಿಯಾಗಿದೆ. ತನ್ನ ವಿವಾಹಿತ ಪ್ರೇಮಿಯ ಮನೆಗೆ ಭೇಟಿ ನೀಡಿದ ಯುವಕನನ್ನು ಆಕೆಯ ಕುಟುಂಬ ಸದಸ್ಯರು ಆಕ್ರೋಶಗೊಂಡು ದೊಣ್ಣೆಗಳಿಂದ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎರಡೂ ಕಡೆಯಿಂದ ಯಾವುದೇ ಔಪಚಾರಿಕ ದೂರು ಬಂದಿಲ್ಲ, ಆದರೂ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುನ್ಷಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಿಂದ ವರದಿಯಾಗಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ವೀಡಿಯೊದಲ್ಲಿ ಯುವಕನನ್ನು ಜನರು ಥಳಿಸುತ್ತಿದ್ದು ಆತನನ್ನು ರಕ್ಷಿಸಲು ಯುವತಿ ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ದಾಳಿಯ ನಂತರ ಯುವಕ ತೀವ್ರವಾಗಿ ಗಾಯಗೊಂಡಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯುವಕ ಯುವತಿಯೊಂದಿಗೆ ಬಹಳ ದಿನಗಳಿಂದ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈಗಾಗಲೇ ಆಕೆಗೆ ಮದುವೆಯಾಗಿದ್ದರೂ ಅವನು ಇದ್ದಕ್ಕಿದ್ದಂತೆ ಅವಳನ್ನು ಭೇಟಿ ಮಾಡಲು ಬಂದಾಗ ಯುವತಿ ಕುಟುಂಬಕ್ಕೆ ವಿಷಯ ತಿಳಿದು ಗೊಡ್ಡ ಗಲಾಟೆಯಾಗಿದೆ.

ಪೊಲೀಸರಿಗೆ ಇನ್ನೂ ಔಪಚಾರಿಕ ದೂರು ದಾಖಲಾಗಿಲ್ಲ. ಆದರೆ ಸಾರ್ವಜನಿಕ ಶಾಂತಿ ಕದಡುವ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳ ವಿರುದ್ಧ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular