HomeKarnatakaBIG NEWS : ಚಿಕ್ಕಮಗಳೂರಿನಲ್ಲಿ ದಾರುಣ ಘಟನೆ : ಓವರ್ ಡೋಸ್ ಇಂಜೆಕ್ಷನ್ ಗೆ 7...

BIG NEWS : ಚಿಕ್ಕಮಗಳೂರಿನಲ್ಲಿ ದಾರುಣ ಘಟನೆ : ಓವರ್ ಡೋಸ್ ಇಂಜೆಕ್ಷನ್ ಗೆ 7 ವರ್ಷದ ಬಾಲಕ ಸಾವು

ಚಿಕ್ಕಮಗಳೂರು: ತೀವ್ರ ಜ್ವರದಿಂದ ಬಳಲುತ್ತಿದ್ದ 7 ವರ್ಷದ ಬಾಲಕನೊಬ್ಬ ವೈದ್ಯರು ಇಂಜಕ್ಷನ್ ನೀಡಿದ ಬಳಿಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಅ ಜ್ಜಂಪುರ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, 7 ವರ್ಷದ ಸೋನೇಶ್ ಮೃತ ಬಾಲಕ. ಕಳೆದ ನಾಲ್ಕು ದಿನಗಳಿಂದ ತೀವ್ರ ಜ್ವರದಿದ ಬಳಲುತ್ತಿದ್ದ ಬಾಲಕನನ್ನು ಪೋಷಕರು ಅಜ್ಜಂಪುರದ ಕ್ಲಿನಿಕ್ ಗೆ ಕರೆದೊಯ್ದಿದ್ದರು. ವೈದ್ಯ ವರುಣ್ ಬಾಲಕನಿಗೆ ಇಂಜಕ್ಷನ್ ನೀಡಿದ್ದರು.

ಬಾಲಕನಿಗೆ ಇಂಜಕ್ಷನ್ ನೀಡಿದ ಸೊಂಟದ ಭಾಗದಲ್ಲಿ ಬೊಬ್ಬೆಗಳು ಕಾಣಿಸಿಕೊಂಡಿದ್ದವು. ಬಾಲಕ ಸ್ಥಿತಿ ಇನ್ನಷ್ಟು ಗಂಭೀರವಾಗಿತ್ತು. ತಕ್ಷಣ ಆತನನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬಾಲಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂಜಕ್ಷನ್ ಓವರ್ ಡೋಸ್ ನಿಂದಾಗಿ ಬಾಲಕ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ. ವೈದ್ಯರ ನಿರ್ಲಕ್ಷಕ್ಕೆ ಬಾಲಕನ ಜೀವವೇ ಹೋಗಿದೆ.

 

For Latest News Updates, Join Our Whatsapp Community🚩
RELATED ARTICLES

Most Popular