ಕಲಬುರಗಿ : ಎಣ್ಣೆ ಪಾರ್ಟಿ ಮಾಡುವ ವೇಳೆ ಯುವಕನ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ಯುವಕನ ಕೈ ಗೆ ಗಂಭೀರ ಗಾಯಗಳಾಗಿದೆ.
ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕಡಗಂಚಿನಲ್ಲಿ ಈ ಘಟನೆ ನಡೆದಿದೆ. ಎಣ್ಣೆ ಪಾರ್ಟಿ ಮಾಡುತ್ತಿದ್ದ ವೇಳೆ ಶ್ರೀಕಾಂತ್ ಪೂಜಾರಿ ಮೇಲೆ ಫೈರಿಂಗ್ ನಡೆದಿದೆ. ಪರಿಣಾಮ ಶ್ರೀಕಾಂತ್ ಪೂಜಾರಿ ಎಡಕೈಗೆ ಗಂಭೀರ ಗಾಯಗಳಾಗಿದೆ.
ಘಟನೆ ಸಂಬಂಧ ಕಾಂತಪ್ಪ, ಮಾಳಪ್ಪ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನರೋಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.