HomeIndiaಸಿಎಂ ಯೋಗಿ ಆದಿತ್ಯನಾಥ್ ರಾತ್ರಿ ವೇಳೆ ವಿಡಿಯೋ ಕಾಲ್ ಮಾಡುತ್ತಾರೆ; ಯುಪಿಯಲ್ಲಿ ಸಂಚಲನ ಸೃಷ್ಟಿಸಿದ ಮಹಿಳೆ...

ಸಿಎಂ ಯೋಗಿ ಆದಿತ್ಯನಾಥ್ ರಾತ್ರಿ ವೇಳೆ ವಿಡಿಯೋ ಕಾಲ್ ಮಾಡುತ್ತಾರೆ; ಯುಪಿಯಲ್ಲಿ ಸಂಚಲನ ಸೃಷ್ಟಿಸಿದ ಮಹಿಳೆ ಹೇಳಿಕೆ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾತ್ರಿ ವೇಳೆ ನನಗೆ ಕರೆ ಮಾಡುತ್ತಾರೆ. ನಾನು ಅವರನ್ನು ಪ್ರೀತಿಸುತ್ತೇನೆಂಬ ಮಹಿಳೆಯೊಬ್ಬರ ಹೇಳಿಕೆ ಉತ್ತರಪ್ರದೇಶದಲ್ಲಿ ಸಂಚಲನ ಸೃಷ್ಟಿಸಿದೆ. ಹೇಮಾ ಸಕ್ಸೇನಾ ಎಂಬ ಮಹಿಳೆ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ನಿವಾಸದ ಮುಂದೆ ಬಂದು ಈ ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದಾರೆ.

ಕಾನ್ಪುರ ಮೂಲದ ಹೇಮಾ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ನಾನು ಪ್ರೀತಿಸುತ್ತಿದ್ದೇನೆ. ಯೋಗಿ ಆದಿತ್ಯನಾಥ್ ಕೂಡ ನನ್ನ ಬಗ್ಗೆ ಇದೇ ರೀತಿಯ ಭಾವನೆ ಹೊಂದಿದ್ದಾರೆ. ಸಿಎಂ ರಾತ್ರಿ ವೇಳೆ ನನಗೆ ವೀಡಿಯೊ ಕರೆ ಮಾಡುತ್ತಾರೆ ಎಂದೂ ಹೇಳಿದ್ದಾಳೆ.

ಯೋಗಿ ತನ್ನೊಂದಿಗೆ ಒಂದು ವರ್ಷದಿಂದ ಸಂಬಂಧ ಹೊಂದಿದ್ದಾರೆಂದು ಸಿಎಂ ನಿವಾಸದ ಮುಂದೆ ನಿಂತು ಹೇಳಿದ ಆಕೆ, ಯೋಗಿ ಆದಿತ್ಯನಾಥ್ ಹೊರಗೆ ಬಂದು ತನ್ನನ್ನು ಭೇಟಿಯಾಗಬೇಕು ಎಂದು ಒತ್ತಾಯಿಸಿದಳು. ಯೋಗಿ ಇತ್ತೀಚಿಗೆ ನನ್ನ ಹುಟ್ಟುಹಬ್ಬಕ್ಕೆ ಕರೆ ಮಾಡಿ ಶುಭಕೋರಿದ್ದರು ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂಚಲನ ಸೃಷ್ಟಿಸಿದ ಮಹಿಳೆಯ ಹೇಳಿಕೆಗಳ ನಂತರ, ಹೇಮಾಳ ತಾಯಿ ತನ್ನ ಮಗಳು ಮಾನಸಿಕವಾಗಿ ತೊಂದರೆಗೀಡಾಗಿದ್ದಾಳೆ ಎಂದು ಸ್ಪಷ್ಟಪಡಿಸಿದರು. ಹೇಮಾಳ ಮಾನಸಿಕ ಆರೋಗ್ಯ ಸ್ಥಿರವಾಗಿಲ್ಲ, ಅದಕ್ಕಾಗಿಯೇ ಈ ರೀತಿಯ ವಿಚಿತ್ರ ಹೇಳಿಕೆಗಳನ್ನು ನೀಡುತ್ತಿದ್ದಾಳೆ ಎಂದು ಅವರ ತಾಯಿ ಹೇಳಿದ್ದಾರೆ. ಪ್ರಸ್ತುತ ಹೇಮಾ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಖಚಿತಪಡಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular