HomeEntertainment'1990s' ಚಿತ್ರದ ಮೊದಲ ಹಾಡು ರಿಲೀಸ್

‘1990s’ ಚಿತ್ರದ ಮೊದಲ ಹಾಡು ರಿಲೀಸ್

ನಂದಕುಮಾರ್ ಸಿಎಂ ನಿರ್ದೇಶನದ ಅರುಣ್ ಅಭಿನಯದ ಬಹು ನಿರೀಕ್ಷಿತ ಚಿತ್ರದ ಮೊದಲ ಹಾಡು ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ದಿನಗಳು ಕ್ಷಣಗಳು ಎಂಬ ಈ ಹಾಡಿಗೆ ಚಿನ್ಮಯಿ ಶ್ರೀಪಾದ ಹಾಗೂ ಅಭಿಷೇಕ್ ಎಂಆರ್ ಮತ್ತು ವಿಷ್ಣು ಧ್ವನಿಯಾಗಿದ್ದು, ಈಸಿ ಮಹಾರಾಜ ಸಂಗೀತ ಸಂಯೋಜನೆ ನೀಡಿದ್ದಾರೆ.  ಇನ್ನುಳಿದಂತೆ ಚಂದ್ರಮೋಹನ್ ಅವರ ಸಾಹಿತ್ಯವಿದೆ.

ಈ ಚಿತ್ರವನ್ನು ಮನಸು ಮಲ್ಲಿಗೆ ಕಂಬೈನ್ಸ್ ಸಂಸ್ಥೆ ನಿರ್ಮಾಣ ಮಾಡಿದ್ದು, ಅರುಣ್ ಅವರಿಗೆ ಜೋಡಿಯಾಗಿ ರಾಣಿ ವಾರದ್ ಅಭಿನಯಿಸಿದ್ದಾರೆ, ಕೃಷ್ಣ ಸಂಕಲನ,  ಎಸ್ ಹಾಲೇಶ್ ಛಾಯಾಗ್ರಹಣ,‌ ಅಶೋಕ್ ಸಾಹಸ ನಿರ್ದೇಶನ ಹಾಗೂ ಸಾಧಿಕ್ ಸರ್ದಾರ್ ನೃತ್ಯ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular