alex Certify BIG NEWS: ಎಲ್ಲಾ ಜಿಲ್ಲೆಗಳಿಗೂ ‘ಇ-ಆಸ್ತಿ ತಂತ್ರಾಂಶ’ ವಿಸ್ತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಎಲ್ಲಾ ಜಿಲ್ಲೆಗಳಿಗೂ ‘ಇ-ಆಸ್ತಿ ತಂತ್ರಾಂಶ’ ವಿಸ್ತರಣೆ

ಬೆಂಗಳೂರು: ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ-2 ತಂತ್ರಾಂಶದೊಂದಿಗೆ ಈಗಾಗಲೇ ಸಂಯೋಜಿಸಲಾಗಿರುವ  ಇ- ಆಸ್ತಿ ತಂತ್ರಾಂಶವನ್ನು ಇತರ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ.

ಕೃಷಿ ಜಮೀನಿನ ನೋಂದಣಿಗೆ ಭೂಮಿ ತಂತ್ರಾಂಶದೊಂದಿಗೆ 2006 ರಿಂದಲೇ ಕಾವೇರಿ ತಂತ್ರಾಂಶವನ್ನು ಸಂಯೋಜನೆ ಮಾಡಲಾಗಿರುತ್ತದೆ ಹಾಗೂ ಜಮೀನಿನ ಸರ್ವೆ ನಕ್ಷೆ (ಸ್ಕೆಚ್) – ನಮೂನೆ-11ಇ ಇರುವ ಮೋಜಿಣಿ ತಂತ್ರಾಂಶದೊಂದಿಗೆ ಕಾವೇರಿ ತಂತ್ರಾಂಶವನ್ನು ಸಂಯೋಜನೆ ಮಾಡಲಾಗಿದೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿಯೇತ್ತರ ಸ್ವತ್ತುಗಳ ದಸ್ತಾವೇಜುಗಳ ನೋಂದಣಿಗಾಗಿ ಇ-ಸ್ವತ್ತು ತಂತ್ರಾಂಶವನ್ನು ಕಾವೇರಿ ತಂತ್ರಾಂಶದೊಂದಿಗೆ ಈಗಾಗಲೇ ದಿನಾಂಕ:18-07-2014ರ ಸುತ್ತೋಲೆಯಲ್ಲಿ ಸಂಯೋಜನೆಗೊಳಿಸಲಾಗಿದೆ.

ರಾಮನಗರ ಮತ್ತು ಕನಕಪುರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸ್ವತ್ತುಗಳ ದಸ್ತಾವೇಜುಗಳ ನೋಂದಣಿಗಾಗಿ ಇ-ಆಸ್ತಿ ತಂತ್ರಾಂಶವನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ-2 ತಂತ್ರಾಂಶದೊಂದಿಗೆ ಪ್ರಾಯೋಗಿಕವಾಗಿ ದಿನಾಂಕ: 29-01-2020ರಂದು ಜೋಡಣೆ /ಸಂಯೋಜನೆ ಮಾಡಿ ಆದೇಶ ಹೊರಡಿಸಲಾಗಿದ್ದು, ಇದು ಯಶಸ್ವಿಯಾಗಿರುತ್ತದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ 42 ವಾರ್ಡ್‌ಗಳಲ್ಲಿ ಹಾಗೂ ರಾಮನಗರ ಮತ್ತು ಕನಕಪುರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಪ್ರದೇಶಗಳನ್ನು ಹೊರತುಪಡಿಸಿ, ಇನ್ನುಳಿದ ನಗರ ಪ್ರದೇಶಗಳಲ್ಲಿ ಸ್ವತ್ತುಗಳಿಗೆ ಇ-ಆಸ್ತಿ ಖಾತಾ ಇಲ್ಲದಿದ್ದಲ್ಲಿ ಸಾರ್ವಜನಿಕರು ಸಂಯೋಜನೆಯತ್ತರ ನೋಂದಣಿಯ ಮಾದರಿಯನ್ನು ಆಯ್ಕೆ ಮಾಡಿಕೊಂಡು ದಸ್ತಾವೇಜನ್ನು ನೋಂದಾಯಿಸಿಕೊಳ್ಳಲು ಇರುವ ಅವಕಾಶವನ್ನು ದುರುಪಯೋಗಪಡಿಸಿಕೊಂಡು ಕಾವೇರಿ ತಂತ್ರಾಂಶದಲ್ಲಿ ಸ್ವತ್ತಿನ ಸ್ವರೂಪವನ್ನು “ಇತರೆ” ಎಂದು ಆಯ್ಕೆ ಮಾಡಿಕೊಂಡು ಕೆಲವು ಕಛೇರಿಗಳಲ್ಲಿ ಕ್ರಮಬದ್ಧವಲ್ಲದ ಸ್ವತ್ತುಗಳ ನೋಂದಣಿ ಮಾಡಲಾಗುತ್ತಿರುವುದು ಕಂಡು ಬಂದಿದೆ. ಸ್ಥಿರಾಸ್ತಿಗಳಿಗೆ ಸಂಬಂಧಿಸಿದ ದಸ್ತಾವೇಜುಗಳನ್ನು ಸ್ವತ್ತನ್ನು ಗುರುತಿಸಬಲ್ಲ ವಿವರಣೆ ಇಲ್ಲದ ಹೊರತು ನೋಂದಣಿಗೆ ಸ್ವೀಕರಿಸಬಾರದೆಂದು ನೋಂದಣಿ ಕಾಯ್ದೆ 1908ರ ಕಲಂ 21ರಲ್ಲಿ ಅವಕಾಶ ಕಲ್ಪಿಸಿರುವುದರಿಂದ, ಇ-ಖಾತೆಯಲ್ಲಿ ಮಾತ್ರ ಸ್ವತ್ತಿನ ಪಿಐಡಿ ಸಂಖ್ಯೆ ಲಭ್ಯವಾಗುವುದರಿಂದ, ಕಾವೇರಿ-2.0 ತಂತ್ರಾಂಶದಲ್ಲಿ ಕೃಷಿಯೇತ್ತರ ಸ್ವತ್ತುಗಳನ್ನು ಒಳಗೊಂಡಿರುವ ದಸ್ತಾವೇಜುಗಳಿಗೆ ಕಡ್ಡಾಯವಾಗಿ ಇ-ಸ್ವತ್ತು ಅಥವಾ ಇ-ಆಸ್ತಿ ತಂತ್ರಾಂಶಗಳಿಂದ ಮಾಹಿತಿ ಪಡೆದು ನೋಂದಾಯಿಸಲು ಹಾಗೂ ಸಂಯೋಜನೆಯೇತ್ತರ ವಿಧಾನದಲ್ಲಿ ನೋಂದಣಿಯನ್ನು ನಿಲ್ಲಿಸಲು ಅನುಮತಿ ನೀಡುವಂತೆ ಹಾಗೂ ಸಂಯೋಜನೆಯನ್ನು ಹಂತ ಹಂತವಾಗಿ ಮಾಡಲಾಗುವುದೆಂದು ಪ್ರಸ್ತಾವನೆಯಲ್ಲಿ ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು ಕೋರಿರುತ್ತಾರೆ.

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಗೆ ಇ-ಆಸ್ತಿ ತಂತ್ರಾಂಶವನ್ನು ಕಾವೇರಿ-2 ತಂತ್ರಾಂಶದೊಂದಿಗೆ ರಾಜ್ಯದ 4 ಜಿಲ್ಲೆಗಳಾದ ಚಾಮರಾಜನಗರ, ಚಿತ್ರದುರ್ಗ, ಬಾಗಲಕೋಟೆ ಮತ್ತು ರಾಯಚೂರು ಜಿಲ್ಲೆಗಳಲ್ಲಿ ದಿನಾಂಕ: 09-09-2024 ರಿಂದ ಸಂಯೋಜನೆಗೊಳಿಸಲು ಹಾಗೂ ಇ-ಆಸ್ತಿ ತಂತ್ರಾಂಶದಿಂದ ಮಾತ್ರ ಮಾಹಿತಿ ಪಡೆದು ನೋಂದಾಯಿಸಲು ದಿನಾಂಕ: 02-09-2024 ರಂದು ಆದೇಶ ಹೊರಡಿಸಲಾಗಿದೆ.

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಗೆ ಇ-ಆಸ್ತಿ ತಂತ್ರಾಂಶವನ್ನು ಕಾವೇರಿ-20 ತಂತ್ರಾಂಶದೊಂದಿಗೆ ರಾಜ್ಯದ 08 ಜಿಲ್ಲೆಗಳಾದ ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಹಾವೇರಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ದಿನಾಂಕ: 23-09-2024 ರಿಂದ ಸಂಯೋಜನೆಗೊಳಿಸುವ ಸಂಬಂಧ ಮೇಲೆ ಕ್ರಮ ಸಂಖ್ಯೆ (8) ರಲ್ಲಿ ದಿನಾಂಕ: 17-09-2024 ರಂದು ಆದೇಶ ಹೊರಡಿಸಲಾಗಿದೆ.

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಗೆ ಇ-ಆಸ್ತಿ ತಂತ್ರಾಂಶವನ್ನು ಕಾವೇರಿ-2.0 ತಂತ್ರಾಂಶದೊಂದಿಗೆ ಉಳಿದ 23, ಜಿಲ್ಲೆಗಳಾದ ಶಿವಾಜಿನಗರ, ಜಯನಗರ, ರಾಜಾಜಿನಗರ, ಬಸವನಗುಡಿ, ಗಾಂಧಿನಗರ, ಬೆಂಗಳೂರು ಗ್ರಾಮಾಂತರ, ಉಡುಪಿ, ಕಾರವಾರ, ಮಂಗಳೂರು, ಧಾರವಾಡ, ವಿಜಯಪುರ, ವಿಜಯನಗರ, ಕೊಡಗು, ಮೈಸೂರು, ಮಂಡ್ಯ, ರಾಮನಗರ, ಯಾದಗಿರಿ, ತುಮಕೂರು, ಶಿವಮೊಗ್ಗ, ಕೋಲಾರ, ಕಲಬುರಗಿ, ಗದಗ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ದಿನಾಂಕ: 07- 10-2024 ರಿಂದ ಸಂಯೋಜನೆಗೊಳಿಸುವಂತೆ ಪ್ರಸ್ತಾವನೆಯಲ್ಲಿ ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು ಕೋರಿರುತ್ತಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಗಾಗಿ ಭೌತಿಕ ಖಾತಾ ದಾಖಲೆಗಳನ್ನು ಪರಿಗಣಿಸದೇ, ಇ-ಆಸ್ತಿ ತಂತ್ರಾಂಶದ ಮೂಲಕ ಮಾತ್ರ ಕಡ್ಡಾಯವಾಗಿ ಪಡೆದು ನೋಂದಾಯಿಸಲು, ಇ-ಆಸ್ತಿ ತಂತ್ರಾಂಶವನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ-2 ತಂತ್ರಾಂಶದೊಂದಿಗೆ ಸಂಯೋಜಿಸಿ ಈಗಾಗಲೇ ಜಾರಿಯಲ್ಲಿರುವ 41 ವಾರ್ಡ್‌ಗಳೊಂದಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎಲ್ಲಾ ವಾರ್ಡ್‌ಳಿಗೂ ಸಹ ವಿಸ್ತರಿಸಿ ಈ ವ್ಯವಸ್ಥೆಯನ್ನು ದಿನಾಂಕ: 30-09-2024 ರಿಂದ ಜಾರಿಗೆ ಬರುವಂತೆ ಅನುಷ್ಠಾನಗೊಳಿಸಿ ໖:12-09-20240 ಆದೇಶ ಹೊರಡಿಸಲಾಗಿರುವುದರಿಂದ ಹಾಗೂ ನಗರಾಭಿವೃದ್ಧಿ ಇಲಾಖೆಯು ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿಗಳ ಹಕ್ಕು ವರ್ಗಾವಣೆಗೆ ಸಂಬಂಧಿಸಿದಂತೆ ಇ-ಆಸ್ತಿ ತಂತ್ರಾಂಶ ಮತ್ತು ಕಾವೇರಿ ತಂತ್ರಾಂಶವನ್ನು ಜೋಡಣೆ ಮಾಡಲು ನಗರಾಭಿವೃದ್ಧಿ ಇಲಾಖೆಯು ಸಹಮತಿ ನೀಡಿರುವುದರಿಂದ ಹಾಗೂ ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರವರ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಯನ್ನು ಇ-ಆಸ್ತಿ ತಂತ್ರಾಂಶದಿಂದ ಕಡ್ಡಾಯವಾಗಿ ಮಾಹಿತಿ ಪಡೆದು ನೋಂದಾಯಿಸಲು ಇ-ಆಸ್ತಿ ತಂತ್ರಾಂಶವನ್ನು ಕಾವೇರಿ-2 ತಂತ್ರಾಂಶದೊಂದಿಗೆ ಉಳಿದ 18 ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಉಡುಪಿ, ಕಾರವಾರ, ಮಂಗಳೂರು, ಧಾರವಾಡ, ವಿಜಯಪುರ, ವಿಜಯನಗರ, ಕೊಡಗು, ಮೈಸೂರು, ಮಂಡ್ಯ, ರಾಮನಗರ, ಯಾದಗಿರಿ, ತುಮಕೂರು, ಶಿವಮೊಗ್ಗ, ಕೋಲಾರ, ಕಲಬುರಗಿ, ಗದಗ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ದಿನಾಂಕ:07-10-2024 ರಿಂದ ಸಂಯೋಜನೆಗೊಳಿಸಲು ಸರ್ಕಾರವು ತೀರ್ಮಾನಿಸಿ ಕೆಳಕಂಡಂತೆ ಆದೇಶಿಸಿದೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಯನ್ನು ಇ-ಆಸ್ತಿ ತಂತ್ರಾಂಶದಿಂದ ಕಡ್ಡಾಯವಾಗಿ ಮಾಹಿತಿ ಪಡೆದು ನೋಂದಾಯಿಸಲು ಇ-ಆಸ್ತಿ ತಂತ್ರಾಂಶವನ್ನು ಕಾವೇರಿ-2 ತಂತ್ರಾಂಶದೊಂದಿಗೆ ಈಗಾಗಲೇ ಸಂಯೋಜಿಸಲಾಗಿದ್ದು, ಈ ತಂತ್ರಾಂಶದ ಸಂಯೋಜನೆಯನ್ನು ರಾಜ್ಯದ ಉಳಿದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಿ (18 ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಉಡುಪಿ, ಕಾರವಾರ, ಮಂಗಳೂರು, ಧಾರವಾಡ, ವಿಜಯಪುರ, ವಿಜಯನಗರ, ಕೊಡಗು, ಮೈಸೂರು, ಮಂಡ್ಯ, ರಾಮನಗರ, ಯಾದಗಿರಿ, ತುಮಕೂರು, ಶಿವಮೊಗ್ಗ, ಕೋಲಾರ, ಕಲಬುರಗಿ, ಗದಗ ಹಾಗೂ ಬೆಳಗಾವಿ ಜಿಲ್ಲೆಗಳಿಗೆ) ದಿನಾಂಕ:07-10-2024 ರಿಂದ – ತಂತ್ರಾಂಶ ಹಾಗೂ ಕಾವೇರಿ-2 ತಂತ್ರಾಂಶದ ಸಂಯೋಜನೆಯಿಂದ ಮಾತ್ರ ಮಾಹಿತಿ ಪಡೆದು ನೋಂದಾಯಿಸಲು ಆದೇಶಿಸಿದೆ. ಈ ವ್ಯವಸ್ಥೆಯನ್ನು ನೋಂದಣಿಗಾಗಿ ಅನುಷ್ಠಾನಗೊಳಿಸಲು ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು ಎಲ್ಲಾ ಅಗತ್ಯ ಕ್ರಮ ವಹಿಸುವುದು.

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಯನ್ನು ಇ-ಆಸ್ತಿ ತಂತ್ರಾಂಶದಿಂದ ಮಾಹಿತಿ ಪಡೆಯದೇ ಬೇರೆ ಯಾವುದೇ ವಿಧಾನದಲ್ಲಿ ಸ್ಥಿರಾಸ್ತಿಗಳ ನೋಂದಣಿ ಮಾಡಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿ/ ನೌಕರರ ವಿರುದ್ಧ ಕಾನೂನಿನನ್ವಯ ಕ್ರಮ ಹಾಗೂ ಇಲಾಖಾ ವಿಚಾರಣೆಯನ್ನು ಜರುಗಿಸಲಾಗುವುದು ಎಂದು ಕಂದಾಯ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...
Entdecken Sie die besten Tipps und Tricks für ein einfacheres Leben, leckere Rezepte und nützliche Artikel über Gartenarbeit auf unserer Website. Wir liefern Ihnen alles, was Sie brauchen, um Ihr Zuhause und Ihren Garten zu verschönern und zu verbessern. Lassen Sie sich von unseren Experten inspirieren und erfahren Sie, wie Sie Ihr Leben leichter und bunter gestalten können. Besuchen Sie uns noch heute und entdecken Sie neue Wege, um Ihr Leben zu bereichern! Köstliche Hühnerleberkuchen: Ein traditionelles Rezept Gurkensalat mit geschmolzenem Käse Winterliches gelbes Pflaumenkompott Andere Verwendung Ernährung bei Pankreatitis: Welches Pflanzenöl das gesündeste und Kirschtomatensalat mit Basilikum und Käsesauce: Hühnerherz-Salat mit Gurke und Ei in Joghurt-Dressing Saft selber Winterliches Pflaumenkompott ohne Kerne Mozzarella-Spieße mit Tomaten und Basilikum - Einfaches und leckeres Fingerfood Die faszinierendsten Frühstücksaufläufe Forscher warnen: Knackiger Salat mit Gurken und Zitronen-Sesam-Dressing Nudeln mit Aufschnitt, Eingelegte junge Rüben: Ein köstliches Wie man die Schnelle Französische Pfannkuchen: Drei Zutaten für Pfeffer mit Die besten Marinaden für Die besten Lebensmittel für Herrlicher Couscous mit Würstchen, Erbsen und Kirschtomaten Gemüse mit Makrele: Ein Wintergenuss Hähnchen-Nudeln mit Tomaten: Ein Gurke, Rote Richtiges Lagern von Lebensmitteln im Kühlschrank: Tipps und Tricks Pilaw über dem Feuer Tomatensalat mit Frühlingszwiebel-Vinaigrette Gurkensalat mit Eingelegte Auberginen mit Knoblauch für den Winter Das Three Deuces-System: Die perfekte Diät für Rührei mit Tomaten und Wurst: Ein leckeres Frühstücksgericht Kochzeit für weiche Rüben: Tipps und Tricks Einkauf und Lagerung von Erfrischender kalter Soba-Nudelsalat mit Gurken und Auberginen nach koreanischer Art für den Winter" - Tomaten-Erdbeer-Salat mit Basilikum-Dressing: Fruchtiger Genuss für den Sommer Gegrillt oder grün: Der Entdecken Sie nützliche Tipps und Tricks für den Alltag, leckere Rezepte und nützliche Informationen zum Thema Gartenarbeit auf unserer Website. Wir bieten Ihnen eine Vielzahl von Anleitungen und Ratschlägen, die Ihnen das Leben erleichtern und Ihre Kochkunst verbessern. Tauchen Sie ein in die Welt der ländlichen Lebensweise und lassen Sie sich von unseren Artikeln inspirieren. Viel Spaß beim Lesen und Ausprobieren!