HomeEntertainment'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' ಚಿತ್ರದ ವಿಡಿಯೋ ಹಾಡು ರಿಲೀಸ್

‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ ಚಿತ್ರದ ವಿಡಿಯೋ ಹಾಡು ರಿಲೀಸ್

ದಳಪತಿ ವಿಜಯ್ ಅಭಿನಯದ ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’  ಸದ್ಯ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ್ದು, ಹೊಸ ದಾಖಲೆ ಬರೆಯಲು ಸಜ್ಜಾಗಿದೆ. ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ ಚಿತ್ರದ ‘ಮಟ್ಟಾ’ ಎಂಬ ಲಿರಿಕಲ್ ಹಾಡು ಈಗಾಗಲೇ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿ ಭರ್ಜರಿ ಸೌಂಡ್  ಮಾಡಿದ್ದು, ಇದರ ಸಂಪೂರ್ಣ ವಿಡಿಯೋ ಹಾಡನ್ನು ನಿನ್ನೆ  ಟಿ ಸೀರೀಸ್ ಯೂಟ್ಯೂಬ್ ಚಾನೆಲ್ ನಲ್ಲಿ  ರಿಲೀಸ್ ಮಾಡಲಾಗಿದೆ. ಯುವನ್ ಶಂಕರ್ ರಾಜಾ, ಶೆನ್ಬಗರಾಜ್, ವೇಲು, ಸ್ಯಾಮ್, ನಾರಾಯಣನ್ ರವಿಶಂಕರ್  ಈ ಹಾಡಿಗೆ ಧ್ವನಿಯಾಗಿದ್ದು, ಯುವನ್ ಶಂಕರ್ ರಾಜ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ವಿವೇಕ್ ಅವರ ಸಾಹಿತ್ಯವಿದೆ.

ಈ ಚಿತ್ರವನ್ನು a.g.s ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ಕಲ್ಪಾತಿ ಎಸ್ ಅಘೋರಂ, ಕಲ್ಪತಿ ಎಸ್ ಗಣೇಶ್, ಕಲ್ಪತಿ ಎಸ್ ಸುರೇಶ್ ನಿರ್ಮಾಣ ಮಾಡಿದ್ದು, ದಳಪತಿ ವಿಜಯ್ ಸೇರಿದಂತೆ ಪ್ರಶಾಂತ್, ಪ್ರಭುದೇವ, ಮೀನಾಕ್ಷಿ ಚೌಧರಿ ,ಅಜ್ಮಲ್ ಅಮೀರ್, ಜಯರಾಮ್, ಮೋಹನ್, ವಿಟಿವಿ ಗಣೇಶ್, ಯೋಗಿ ಬಾಬು, ಬಣ್ಣ ಹಚ್ಚಿದ್ದಾರೆ. ವೆಂಕಟ್ ರಾಜೇನ್ ಸಂಕಲನ, ವಿಜಿ ಹಾಗೂ ವೆಂಕಟ್ ಪ್ರಭು ಅವರ ಸಂಭಾಷಣೆ, ದಿಲೀಪ್ ಸುಬ್ಬರಾಯನ್ ಸಾಹಸ ನಿರ್ದೇಶನ, ಶೇಖರ್ ವಿಜೆ ನೃತ್ಯ  ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular