HomeLive Newsಇಂದು ಆಫ್ಘಾನಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಅಂತಿಮ ಏಕದಿನ ಪಂದ್ಯ

ಇಂದು ಆಫ್ಘಾನಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಅಂತಿಮ ಏಕದಿನ ಪಂದ್ಯ

ಅಫ್ಘಾನಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಏಕದಿನ ಸರಣಿಯ ಎರಡು ಪಂದ್ಯಗಳಲ್ಲೂ ಅಫ್ಘಾನಿಸ್ತಾನ ತಂಡ ಜಯಭೇರಿ ಸಾಧಿಸುವ ಮೂಲಕ ಹೊಸ ದಾಖಲೆ ಬರೆದಿದೆ. ಆಫ್ಘಾನಿಸ್ತಾನ ತಂಡ ಮೊನ್ನೆ ನಡೆದ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾದ ಎದುರು 177 ರನ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸರಣಿ  ಕೈ ವಶ ಮಾಡಿಕೊಂಡಿದ್ದು, ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

ಇಂದು ಅಂತಿಮ ಏಕದಿನ ಪಂದ್ಯ ನಡೆಯುತ್ತಿದ್ದು, ಅಫ್ಘಾನಿಸ್ತಾನ ತಂಡ ಕ್ಲೀನ್ ಸ್ವೀಪ್ ಮಾಡುವ ನಿರೀಕ್ಷೆಯಲ್ಲಿದೆ. ದಕ್ಷಿಣ ಆಫ್ರಿಕಾ ತಂಡ ಈ ಪಂದ್ಯದಲ್ಲಿ ಸೋಲು ಕಂಡರೆ ಐಸಿಸಿ ಏಕದಿನ  ರಾಂಕಿಂಗ್ ನಲ್ಲಿ ಕೆಳಗಿಳಿಯುವ ಸಾಧ್ಯತೆಯಿದ್ದು, ಇಂದು ಬಹು ಮುಖ್ಯವಾದ ಪಂದ್ಯವಾಗಿದೆ. ರೀಜಾ ಹೆಂಡ್ರಿಕ್ಸ್, ಐಡೆನ್ ಮಾರ್ಕ್ರಾಮ್, ತೆಂಬ ಬವುಮ ಅವರಿಂದ ಉತ್ತಮ ಬ್ಯಾಟಿಂಗ್ ಪ್ರದರ್ಶನ ದೊರೆಯದೆ ಇರುವ ಕಾರಣ ದಕ್ಷಿಣಾ ಕ್ರಿಕೆಟ್ ತಂಡ ಜಯ ಕಾಣುವಲ್ಲಿ ವಿಫಲವಾಗುತ್ತಿದೆ.

For Latest News Updates, Join Our Whatsapp Community🚩
RELATED ARTICLES

Most Popular