HomeIndiaBIG NEWS: ತಮಿಳುನಾಡಿನಲ್ಲಿ ಬೆಂಗಳೂರಿನ ಯುವಕನ ಬರ್ಬರ ಹತ್ಯೆ: ಕೈಯಲ್ಲಿದ್ದ ಹಚ್ಚೆ ನೋಡಿ ಪತ್ತೆ ಮಾಡಿದ...

BIG NEWS: ತಮಿಳುನಾಡಿನಲ್ಲಿ ಬೆಂಗಳೂರಿನ ಯುವಕನ ಬರ್ಬರ ಹತ್ಯೆ: ಕೈಯಲ್ಲಿದ್ದ ಹಚ್ಚೆ ನೋಡಿ ಪತ್ತೆ ಮಾಡಿದ ಪೊಲೀಸರು

ಚೆನ್ನೈ: ತಮಿಳುನಾಡಿನಲ್ಲಿ ಬೆಂಗಳೂರಿನ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ರೇವಂತ್ ಕೊಲೆಯಾಗಿರುವ ಯುವಕ. ಯುವಕನ ಕೈಯಲ್ಲಿದ್ದ ಹಚ್ಚೆಯ ಆಧಾರದ ಮೇಲೆ ಯುವಕನ ಬಗ್ಗೆ ತಮಿಳುನಾಡು ಪೊಲೀಸರು ಗುರುತು ಪತ್ತೆ ಮಾಡಿದ್ದಾರೆ. ಮೃತ ಯುವಕ ಬೆಂಗಳೂರಿನ ವರ್ತೂರು ಸಮೀಪದ ಸೂಲಕೊಂಡ ನಿವಾಸಿ ಎಂದು ತಿಳಿದುಬಂದಿದೆ.

ಪರಿಚಯಸ್ಥರಿಒಬ್ಬರು ಕಾರಿನಲ್ಲಿ ರೇವಂತ್ ನನ್ನು ತಮಿಳುನಾಡಿಗೆ ಕರೆದುಕೊಂಡು ಹೋಗಿದ್ದರು. ಎರ್ಡು ದಿನಗಳ ಹಿಂದೆಯೇ ಯುವಕನ ಕೊಲೆಯಾಗಿದೆ ಎಂದು ತಿಳಿದುಬಂದಿದೆ. ತಮಿಳುನಾಡು ಪೊಲೀಸರು ಯುವಕನ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಯಾವಕಾರಣಕ್ಕೆ ಯುವಕನನ್ನು ಕೊಲೆಗೈಯ್ಯಲಾಗಿದೆ ಎಂಬುದು ನಿಖರವಾಗಿ ತಿಳಿದುಬಂದಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular