HomeEntertainmentಲೆಜೆಂಡ್ಸ್ ಲೀಗ್ ಕ್ರಿಕೆಟ್ ; ಇಂದು ಇಂಡಿಯಾ ಕ್ಯಾಪಿಟಲ್ಸ್ ಹಾಗೂ ಟೊಯಂ ಹೈದರಾಬಾದ್ ಮುಖಾಮುಖಿ

ಲೆಜೆಂಡ್ಸ್ ಲೀಗ್ ಕ್ರಿಕೆಟ್ ; ಇಂದು ಇಂಡಿಯಾ ಕ್ಯಾಪಿಟಲ್ಸ್ ಹಾಗೂ ಟೊಯಂ ಹೈದರಾಬಾದ್ ಮುಖಾಮುಖಿ

ನಿನ್ನೆಯಿಂದ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಆರಂಭವಾಗಿದ್ದು, ಮಾಜಿ ಕ್ರಿಕೆಟಿಗರ ಬ್ಯಾಟಿಂಗ್ ಹಾಗೂ ಬೌಲಿಂಗ್ ನೋಡಲು ಪ್ರೇಕ್ಷಕರು ಕಿಕ್ಕಿರಿದು ಸೇರುತ್ತಿದ್ದಾರೆ. ಶಿಖರ್ ಧವನ್ ಕೂಡ ಲೆಜೆಂಡ್ಸ್ ಲೀಗ್ ಕ್ರಿಕೆಟ್ ನಲ್ಲಿ ಸೇರ್ಪಡೆಯಾಗಿದ್ದು, ಗಬ್ಬರ್ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.

ಇಂದು ಸುರೇಶ್ ರೈನಾ ನಾಯಕತ್ವದ ಟೊಯಂ ಹೈದರಾಬಾದ್ ಹಾಗೂ ಇಯಾನ್ ಬೆಲ್ ನಾಯಕತ್ವದ ಇಂಡಿಯಾ ಕ್ಯಾಪಿಟಲ್ಸ್  ಮುಖಾಮುಖಿಯಾಗುತ್ತಿದ್ದು, ಕ್ರಿಕೆಟ್  ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸುರೇಶ್ ರೈನಾ ಸೇರಿದಂತೆ ಶಾನ್ ಮಾರ್ಷ್, ಡ್ವೇನ್ ಸ್ಮಿತ್, ಹಾಶಿಮ್ ಆಮ್ಲಾರಂತಹ ದಿಗ್ಗಜ ಆಟಗಾರರ ಬ್ಯಾಟಿಂಗ್ ನೋಡುವುದೇ  ದೊಡ್ಡ ಹಬ್ಬವಾಗಿದೆ. ಇಂದು ಮತ್ತೊಂದು ರೋಮಾಂಚನಕಾರಿ ಪಂದ್ಯಕ್ಕೆ ಜೋಧ್ಪುರ್ ಕ್ರೀಡಾಂಗಣ ಸಜ್ಜಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular