HomeKarnatakaಹೊದಿಕೆ ಹಾಕುವ ವೇಳೆ ರಥದ ಮೇಲಿಂದ ಬಿದ್ದು ಪೂಜಾರಿ ಸಾವು

ಹೊದಿಕೆ ಹಾಕುವ ವೇಳೆ ರಥದ ಮೇಲಿಂದ ಬಿದ್ದು ಪೂಜಾರಿ ಸಾವು

ಬಾಗಲಕೋಟೆ: ರಥೋತ್ಸವ ಮುಗಿದ ನಂತರ ನಿಂತಿದ್ದ ರಥಕ್ಕೆ ಮೇಲು ವಸ್ತ್ರ ಹೊದಿಸುವ ವೇಳೆ ಕಾಲು ಜಾರಿ ರಥದ ಮೇಲಿಂದ ಬಿದ್ದು ಪೂಜಾರಿ ಮೃತಪಟ್ಟಿದ್ದಾರೆ.

ಬಾಗಲಕೋಟೆ ಜಿಲ್ಲೆಯ ರಬಕವಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಘಟನೆ ನಡೆದಿದೆ. ತಿಪ್ಪಯ್ಯ ಗಿರಿಮಲ್ಲಯ್ಯ ಪೂಜಾರಿ(53) ಮೃತಪಟ್ಟವರು. ಶ್ರಾವಣದಲ್ಲಿ ರಥೋತ್ಸವ ಮುಗಿದು ನಿಂತಿದ್ದ ರಥಕ್ಕೆ ಮೇಲು ವಸ್ತ್ರ ಹೊದಿಸುವ ವೇಳೆ ಘಟನೆ ನಡೆದಿದೆ.

ರಥಕ್ಕೆ ಧೂಳು ಹಿಡಿಯಬಾರದು ಎಂಬ ಉದ್ದೇಶದಿಂದ ಮೇಲು ವಸ್ತ್ರ ಹೊದಿಸಲಾಗುತ್ತದೆ. ರಥದ ಮೇಲೆ ಹತ್ತಿ ಹೊದಿಕೆ ಹಾಕುವ ವೇಳೆ ತಿಪ್ಪಯ್ಯ ಏಕಾಏಕಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ. ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular