alex Certify ಧರ್ಮಸ್ಥಳ ಸಂಘದ ಕಿರುಕುಳದ ಬಗ್ಗೆ ಶಾಸಕರ ಆರೋಪ ಬೆನ್ನಲ್ಲೇ ಮಹಿಳೆ ಆತ್ಮಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧರ್ಮಸ್ಥಳ ಸಂಘದ ಕಿರುಕುಳದ ಬಗ್ಗೆ ಶಾಸಕರ ಆರೋಪ ಬೆನ್ನಲ್ಲೇ ಮಹಿಳೆ ಆತ್ಮಹತ್ಯೆ

ಮಂಡ್ಯ: ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ ಮಹಿಳೆಯರಿಗೆ ಸಾಲ ನೀಡಿ ಅತಿ ಹೆಚ್ಚು ಬಡ್ಡಿ ವಸೂಲಿ ಮಾಡುವ ಮೂಲಕ ಬಡವರನ್ನು ಶೋಷಣೆ ಮಾಡಲು ಹೊರಟಿದೆ. ಧರ್ಮಸ್ಥಳ ಸಂಘದಿಂದ ಮಹಿಳೆಯರು ಹೊರಬಂದು ಸಂಜೀವಿನಿ ಒಕ್ಕೂಟ ಸೇರಬೇಕೆಂದು ಶಾಸಕ ಪಿ.ಎಂ. ನರೇಂದ್ರ ಸ್ವಾಮಿ ಕರೆ ನೀಡಿದ ಬೆನ್ನಲ್ಲೇ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಫೈನಾನ್ಸ್ ನಡೆಸುವ ಸಂಘದಲ್ಲಿ ಸಾಲ ಪಡೆದುಕೊಂಡಿದ್ದ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮಲಿಯೂರು ಗ್ರಾಮದ ಮಹಾಲಕ್ಷ್ಮಿ(35) ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಘದ ಸಿಬ್ಬಂದಿ ಮಾಡಿದ ಅವಮಾನದಿಂದ ಮನನೊಂದು ಮಹಾಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಐದು ತಿಂಗಳ ಹಿಂದೆ ಸಂಘದಲ್ಲಿ 2 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದ ಮಹಾಲಕ್ಷ್ಮಿ ಪ್ರತಿ ಬುಧವಾರ 1700 ರೂ. ಕಂತು ಪಾವತಿಸಬೇಕಿತ್ತು. ಕಂತು ಪಡೆಯಲು ಬಂದಿದ್ದ ನೆಲ್ಲಿಗೆರೆಯ ಪ್ರತಿನಿಧಿ ರತ್ನಮ್ಮ ಹಣ ಕಟ್ಟಲು ಸಮಯ ಕೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದರಿಂದ ಮನವೊಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಹಾಲಕ್ಷ್ಮಿ ಅವರ ಪ್ರತಿ ಮಲ್ಲು ಪೊಲೀಸರಿಗೆ ದೂರು ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...