HomeIndiaBIG NEWS: ದೇಶಾದ್ಯಂತ ಜನಗಣತಿಗೆ ಅಧಿಕೃತ ಪ್ರಕಟಣೆ ಶೀಘ್ರ: ಕೇಂದ್ರ ಸಚಿವ ಅಮಿತ್ ಶಾ ಮಾಹಿತಿ

BIG NEWS: ದೇಶಾದ್ಯಂತ ಜನಗಣತಿಗೆ ಅಧಿಕೃತ ಪ್ರಕಟಣೆ ಶೀಘ್ರ: ಕೇಂದ್ರ ಸಚಿವ ಅಮಿತ್ ಶಾ ಮಾಹಿತಿ

ನವದೆಹಲಿ: ದೇಶಾದ್ಯಂತ ಜನಗಣತಿ ನಡೆಸುವ ಕುರಿತಾಗಿ ಅತಿ ಶೀಘ್ರವೇ ಪ್ರಕಟಣೆ ಹೊರಬೀಳಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಮೋದಿ 3.0 ಸರ್ಕಾರ 100 ದಿನ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಜನಗಣತಿ ನಡೆಸುವ ಕುರಿತು ಅತಿ ಶೀಘ್ರವೇ ಪ್ರಕಟಣೆ ವರ ಬೀಳಲಿದೆ ಎಂದು ಖಚಿತಪಡಿಸಿದ್ದಾರೆ.
ಜನಗಣತಿಯ ಬಗ್ಗೆ ಹೆಚ್ಚಿನ ವಿವರ ನೀಡಲು ನಿರಾಕರಿಸಿದ ಅವರು, ಜನಗಣತಿ ಘೋಷಿಸಿದಾಗ ಎಲ್ಲಾ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರತಿ 10 ವರ್ಷಗಳಿಗೊಮ್ಮೆ ದೇಶದಲ್ಲಿ ಜನಗಣತಿ ನಡೆಸಲಾಗುತ್ತದೆ. ಆದರೆ ಕೋವಿಡ್ ಕಾರಣದಿಂದ 2020ರಲ್ಲಿ ಆರಂಭವಾಗಬೇಕಿದ್ದ ಜನಗಣತಿ ಮುಂದೂಡಲಾಗಿತ್ತು. ಶೀಘ್ರವೇ ಜನಗಣತಿ ಶುರುವಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular