HomeEntertainment'ಭೀಮ' ಚಿತ್ರದ ''ಬ್ಯಾಡ್ ಬಾಯ್ಸ್'' ವಿಡಿಯೋ ಹಾಡು ರಿಲೀಸ್

‘ಭೀಮ’ ಚಿತ್ರದ ”ಬ್ಯಾಡ್ ಬಾಯ್ಸ್” ವಿಡಿಯೋ ಹಾಡು ರಿಲೀಸ್

‘ಸಲಗ’  ಬಳಿಕ ಮತ್ತೊಮ್ಮೆ ದುನಿಯಾ ವಿಜಯ್ ನಿರ್ದೇಶನದಲ್ಲಿ ಮೂಡಿ ಬಂದ ‘ಭೀಮ’ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆದಿದ್ದು, ಇದರ ಮುಂದಿನ ಭಾಗವನ್ನು ತೆರೆ ಮೇಲೆ ತರುವುದಾಗಿ ದುನಿಯಾ ವಿಜಯ್ ಇತ್ತೀಚಿಗಷ್ಟೇ ಮಾಧ್ಯಮ ಒಂದರಲ್ಲಿ ತಿಳಿಸಿದ್ದಾರೆ. ಆಗಸ್ಟ್ 9 ರಂದು ತೆರೆಕಂಡಿದ್ದ ‘ಭೀಮ’ ಸಿನಿಮಾ ಎಲ್ಲರ ಫೇವರೆಟ್ ಆಗಿದ್ದು, ದುನಿಯಾ ವಿಜಯ್ ನಟನೆಗೆ  ಫಿದಾ ಆಗಿದ್ದಾರೆ.

ಕಳೆದ ವರ್ಷ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದ ‘ಭೀಮ’ ಚಿತ್ರದ ”ಬ್ಯಾಡ್ ಬಾಯ್ಸ್” ಹಾಡು ಭರ್ಜರಿ ವೀಕ್ಷಣೆ ಪಡೆದುಕೊಂಡಿತ್ತು. ಇದೀಗ ಇದರ ಸಂಪೂರ್ಣ ವಿಡಿಯೋ ಹಾಡು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ  ರಿಲೀಸ್ ಆಗಿದೆ. ರಾಹುಲ್ ಡಿಟೋ ಹಾಗೂ ಎಂ ಸಿ ಬಿಜ್ಜು ಈ ಹಾಡಿಗೆ ಧ್ವನಿಯಾಗಿದ್ದು, ಚರಣ್ ರಾಜ್ ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular