HomeEntertainmentಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿದ ದಳಪತಿ ವಿಜಯ್ ನಟನೆಯ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್'

ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿದ ದಳಪತಿ ವಿಜಯ್ ನಟನೆಯ ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’

ಸೆಪ್ಟೆಂಬರ್ 5ರಂದು ತೆರೆಕಂಡಿದ್ದ ದಳಪತಿ ವಿಜಯ್ ನಟನೆಯ ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ ಚಿತ್ರ ಅಂದುಕೊಂಡಂತೆ ಸೂಪರ್ ಡೂಪರ್ ಹಿಟ್ ಆಗಿದೆ. ಕೇವಲ ತಮಿಳು ಭಾಷೆಯಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ 400 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿದೆ. ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’  ತಮಿಳು ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದ್ದು, ತನ್ನ ನಾಗಲೋಟವನ್ನು ಮುಂದುವರಿಸಿದೆ.

ವೆಂಕಟ್ ಪ್ರಭು ನಿರ್ದೇಶನದ ಈ ಚಿತ್ರದಲ್ಲಿ ದಳಪತಿ ವಿಜಯ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರಶಾಂತ್, ಪ್ರಭುದೇವ, ಅಜ್ಮಲ್ ಅಮೀರ್, ಮೋಹನ್, ಜಯರಾಮ್, ವೈಭವ್, ಯೋಗಿ ಬಾಬು, ಶ್ರೀನಿಧಿ, ಮೀನಾಕ್ಷಿ ಚೌಧರಿ, ಅಜಯ್ ರಾಜ್, ಕೋಮಲ್ ಶರ್ಮಾ, ಬಣ್ಣ ಹಚ್ಚಿದ್ದಾರೆ. ಎ ಜಿ ಎಸ್ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ಕಲ್ಪತಿ ಎಸ್. ಅಘೋರಂ,ಕಲ್ಪಾತಿ ಎಸ್.ಗಣೇಶ್, ಕಲ್ಪಾಟಿ ಎಸ್.ಸುರೇಶ್, ಬಂಡವಾಳ ಹೂಡಿದ್ದು, ಯುವನ್ ಶಂಕರ್ ರಾಜ ಸಂಗೀತ ಸಂಯೋಜನೆ ನೀಡಿದ್ದಾರೆ. ವೆಂಕಟ್ ರಾಜನ್ ಸಂಕಲನ, ಹಾಗೂ ಸಿದ್ದಾರ್ಥ ಸುನಿ ಛಾಯಾಗ್ರಾಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular