HomeKarnataka'ಮಾಂಸ’ ಮಾರಾಟಗಾರರ ಗಮನಕ್ಕೆ : ಇನ್ಮುಂದೆ ಈ ನಿಯಮ ಪಾಲಿಸೋದು ಕಡ್ಡಾಯ.!

‘ಮಾಂಸ’ ಮಾರಾಟಗಾರರ ಗಮನಕ್ಕೆ : ಇನ್ಮುಂದೆ ಈ ನಿಯಮ ಪಾಲಿಸೋದು ಕಡ್ಡಾಯ.!

ಮಡಿಕೇರಿ ನಗರಸಭಾ ವ್ಯಾಪ್ತಿಯ ಎಲ್ಲಾ ಕುರಿ, ಕೋಳಿ, ಆಡು ಮಾಂಸ ಮಾರಾಟಗಾರರು ಮಾರಾಟ ಮಾಡಲಾಗುತ್ತಿರುವ ಕತ್ತರಿಸಲಾದ ಮಾಂಸಗಳನ್ನು ಅಂಗಡಿ/ ಸ್ಟಾಲ್ಗಳ ಎದುರು ತೆರೆದ ಸ್ಥಿತಿಯಲ್ಲಿ ಪ್ರದರ್ಶನಕ್ಕಾಗಿ ತೂಗು ಹಾಕುವುದು, ತೆರೆದಿಟ್ಟು ಮಾರಾಟ ಮಾಡುವುದು ಕಂಡುಬಂದಿದೆ.

ಇದರಿಂದ ಮಾಂಸದಲ್ಲಿ ನೊಣಗಳು ಕುಳಿತು ರೋಗಾಣುಗಳು ಹರಡಿ ಸಾರ್ವಜನಿಕ ವಲಯದಲ್ಲಿ ಆರೋಗ್ಯ ಸಮಸ್ಯೆಗಳು ಉಂಟಾಗಬಹುದಾಗಿದೆ. ಇದರಿಂದಾಗಿ ತಮ್ಮ-ತಮ್ಮ ಅಂಗಡಿಗಳಲ್ಲಿ ಮಾರಾಟ ಮಾಡಲು ಇರಿಸಲಾದ ಮಾಂಸ ಪದಾರ್ಥಗಳನ್ನು ಮುಚ್ಚಿದ ಗಾಜಿನ ಡಬ್ಬಿಗಳಲ್ಲಿ ಇರಿಸುವುದು ಹಾಗೂ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವಂತೆ ನಗರಸಭೆ ಪೌರಾಯುಕ್ತರಾದ ವಿಜಯ್ ಅವರು ತಿಳಿಸಿದ್ದಾರೆ.

 

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular