HomeKarnatakaBIG NEWS: ಕನ್ನಡಿ ಹಾವು ಹಿಡಿಯಲು ಹೋಗಿ ಅನಾಹುತ: ಹಾವು ಕಚ್ಚಿ ವ್ಯಕ್ತಿ ಸಾವು

BIG NEWS: ಕನ್ನಡಿ ಹಾವು ಹಿಡಿಯಲು ಹೋಗಿ ಅನಾಹುತ: ಹಾವು ಕಚ್ಚಿ ವ್ಯಕ್ತಿ ಸಾವು

ಮಂಗಳೂರು: ಕನ್ನಡಿ ಹಾವನ್ನು ಹಿಡಿಯಲು ಹೋಗಿ, ಅದೇ ಹಾವು ಕಚ್ಚಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದ ಬಜ್ಪೆ ಬಳಿ ನಡೆದಿದೆ.

ರಾಮಚಂದ್ರ ಪೂಜಾರಿ (55) ಮೃತ ದುರ್ದೈವಿ. ಬಜ್ಪೆಯ ಮನೆಯ ಬಳಿ ಕನ್ನಡಿ ಹಾವು ಕಾಣಿಸಿಕೊಂಡಿದೆ. ಈ ವೇಳೆ ರಾಮಚಂದ್ರ ಪೂಜಾರಿ ಹಾವು ಹಿಡಿಯಲು ಹೋಗಿದ್ದಾರೆ. ಈ ವೇಳೆ ಹಾವು ರಾಮಚಂದ್ರ ಅವರಿಗೆ ಕಚ್ಚಿದೆ. ಕನ್ನಡಿ ಹಾವು ವಿಷದ ಹಾವಲ್ಲ ಎಂದು ತಪ್ಪಾಗಿ ತಿಳಿದು ಹಾವು ಕಚ್ಚಿದ್ದನ್ನು ನಿರ್ಲಕ್ಷ್ಯ ಮಾಡಿದ್ದಾರೆ. ತಕ್ಷಣ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವುದನ್ನು ಬಿಟ್ಟು ಮನೆಯಲ್ಲಿಯೇ ಇದ್ದರು.

ಆದರೆ ಕೆಲ ಸಮಯದ ಬಳಿಕ ರಾಮಚಂದ್ರ ಅವರಿಗೆ ತಲೆಸುತ್ತಲು ಆರಂಭವಾಗಿದೆ. ಆರೋಗ್ಯ ಏರುಪೇರಾಗಲಾರಂಭಿಸಿದೆ. ಆಗ ಕುಉಂಬದವರು ರಾಮಚಂದ್ರ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ರಾಮಚಂದ್ರ ಪೂಜಾರಿ ಸಾವನ್ನಪ್ಪಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular