HomeKarnatakaBREAKING NEWS: ಕಬಾಬ್ ಅಂಗಡಿ ಮಾಲೀಕನ ಎಡವಟ್ಟು: ಸಿಲಿಂಡರ್ ಸ್ಫೋಟಕ್ಕೆ ಹೊತ್ತಿ ಉರಿದ ಆಟೋ; 5...

BREAKING NEWS: ಕಬಾಬ್ ಅಂಗಡಿ ಮಾಲೀಕನ ಎಡವಟ್ಟು: ಸಿಲಿಂಡರ್ ಸ್ಫೋಟಕ್ಕೆ ಹೊತ್ತಿ ಉರಿದ ಆಟೋ; 5 ಬೈಕ್ ಗಳು

ಬೆಂಗಳೂರು: ಕಬಾಬ್ ಅಂಗಡಿ ಮಾಲೀಕನ ಎಡವಟ್ಟಿನಿಂದಾಗಿ ರಸ್ತೆ ಬದಿ ನಿಲ್ಲಿಸಿದ್ದ ಆಟೋ ಹಾಗೂ ಬೈಕ್ ಗಳು ಬೆಂಕಿಗಾಹುತಿಯಾಗಿ, ಹೊತ್ತಿ ಉರಿದ ಘಟನೆ ಬೆಂಗಳೂರಿನ ಈಜಿಪುರದ ವಿವೇಕನಗರದಲ್ಲಿ ನಡೆದಿದೆ.

ಕಬಾಬ್ ಅಂಗಡಿಯಲ್ಲಿ ಸಿಲಿಂಡರ್ ಬದಲಿಸುವಾಗ ಗ್ಯಾಸ್ ಲೀಕ್ ಆಗಿದೆ. ತಕ್ಷಣ ಕಬಾಬ್ ಅಂಗಡಿ ಮಾಲಿಕ ಸಿಲಿಂಡರ್ ಎತ್ತಿ ಎಸೆದಿದ್ದಾನೆ. ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಸಮೇತ ರಸ್ತೆ ಬದಿ ನಿಲ್ಲಿಸಿದ್ದ ಆಟೋ ಮೇಲೆ ಬಿದ್ದಿದೆ. ಬೆಂಕಿ ಹೊತ್ತಿಕೊಂಡು ಉರಿಯಲಾರಂಭಿಸಿದೆ. ಬೆಂಕಿಯ ಕೆನ್ನಾಲಿಗೆ ಅಲ್ಲಿಯೇ ಇದ್ದ 5 ಬೈಕ್ ಗಳಿಗೂ ವ್ಯಾಪಿಸಿದೆ.

ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಆಟೋ ಹಾಗೂ 5 ಬೈಕ್ ಗಳು ಬೆಂಕಿಯಲ್ಲಿ ಧಗ ಧಗನೆ ಹೊತ್ತಿ ಉರಿದಿವೆ. ನೋಡ ನೋಡುತ್ತಿದ್ದಂತೆ ಆಟೋ, ಬೈಕ್ ಗಳು ಸುಟ್ಟು ಕರಕಲಾಗಿವೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular