HomeCrime'ಮಸಾಜ್' ಮಾಡುತ್ತಿದ್ದ ಸೊಸೆ ಮೇಲೆ ವೃದ್ಧ ಮಾವನಿಂದ ರೇಪ್; ಇದು ನಿನ್ನ ಕರ್ತವ್ಯವೆಂದ ಅತ್ತೆ ಮಾತು...

‘ಮಸಾಜ್’ ಮಾಡುತ್ತಿದ್ದ ಸೊಸೆ ಮೇಲೆ ವೃದ್ಧ ಮಾವನಿಂದ ರೇಪ್; ಇದು ನಿನ್ನ ಕರ್ತವ್ಯವೆಂದ ಅತ್ತೆ ಮಾತು ಕೇಳಿ ‘ಶಾಕ್’

ಮಧ್ಯಪ್ರದೇಶದ ಇಂದೋರ್‌ನ ಅನ್ನಪೂರ್ಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಾವನ ಕಾಲುಗಳಿಗೆ ಮಸಾಜ್ ಮಾಡುತ್ತಿದ್ದಾಗ ಅವರು ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಸೊಸೆ ಆರೋಪಿಸಿದ್ದಾರೆ.

ವಯೋಸಹಜ ಕಾಯಿಲೆಯಿಂದ ನರಳುತ್ತಿದ್ದ ತನ್ನ ಮಾವನಿಗೆ ಮಸಾಜ್ ಮಾಡಲು ಅವರ ಕೋಣೆಗೆ ಹೋಗುತ್ತಿದ್ದೆ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದು, ಇಂತಹ ಸಂದರ್ಭದಲ್ಲಿ ಮಾವ ಪರಿಸ್ಥಿತಿಯ ಲಾಭ ಪಡೆದುಕೊಂಡು ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದಿದ್ದಾರೆ. ಇದಕಿಂತ ಆಘಾತಕಾರಿ ಪ್ರಸಂಗವೆಂದರೆ, ಈ ವಿಚಾರವನ್ನು ತನ್ನ ಅತ್ತೆಯ ಬಳಿ  ಸೊಸೆ ಹೇಳಿಕೊಂಡಾಗ ಆಕೆ ‘ಇದು ನಿನ್ನ ಕರ್ತವ್ಯ, ನೀನು ನಿನ್ನ ಮಾವ ಸೇವೆಯನ್ನು ಮುಂದುವರಿಸಬೇಕು’ ಎಂದು ಸೊಸೆಯ ದೂರನ್ನು ತಳ್ಳಿ ಹಾಕಿದ್ದಾರೆ ಎನ್ನಲಾಗಿದೆ.

ಇದನ್ನು ತನ್ನ ಪತಿಯ ಬಳಿ ಹೇಳಿಕೊಂಡಾಗ ಗಂಡನ ನಡೆ ಆಕೆಯನ್ನು ಇನ್ನಷ್ಟು ಘಾಸಿಗೊಳಿಸಿತು. ಪತ್ನಿ ಮಾತನ್ನು ನಂಬದ ಆತ ಆಕೆಗೆ ಬೆಂಬಲವಾಗಿ ನಿಲ್ಲಲಿಲ್ಲ. ಇದರಿಂದ ಬೇಸತ್ತ ಮಹಿಳೆ ತನ್ನ ಅತ್ತೆಯ ಮನೆಯನ್ನು ತೊರೆದು ಭೋಪಾಲ್‌ನಲ್ಲಿರುವ ತನ್ನ ಪೋಷಕರ ಮನೆಗೆ ಮರಳಿದಳು. ನಂತರ ಆಕೆ ತನ್ನ ಮಾವ, ಅತ್ತೆ ಮತ್ತು ಪತಿ ವಿರುದ್ಧ ದೂರು ದಾಖಲಿಸಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂದೋರ್‌ನ ಅನ್ನಪೂರ್ಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತೆಯ ಪ್ರಕಾರ ಮಾವ ತನ್ನ ಮೇಲೆ ಅತ್ಯಾಚಾರ ಮಾಡಿದ್ದು ಮಾತ್ರವಲ್ಲದೆ ಬೆದರಿಕೆ ಹಾಕಿದ್ದಾನೆ. ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ಯಾರೂ ನಂಬುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಭೋಪಾಲ್‌ನಲ್ಲಿರುವ ತನ್ನ ಕುಟುಂಬಕ್ಕೆ ಮಹಿಳೆ ಘಟನೆ ವಿವರಿಸಿದ ನಂತರ, ಸಂತ್ರಸ್ತೆ ಪೊಲೀಸರನ್ನು ಸಂಪರ್ಕಿಸಿ ಔಪಚಾರಿಕ ದೂರು ದಾಖಲಿಸಿದರು. ಭೋಪಾಲ್ ಪೊಲೀಸರು ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಅನ್ನಪೂರ್ಣ ಪೊಲೀಸ್ ಠಾಣೆಗೆ ರವಾನಿಸಿದ್ದಾರೆ. ಇಂದೋರ್‌ನ ಸ್ಥಳೀಯ ಪೊಲೀಸರು, ಭೋಪಾಲ್ ಅಧಿಕಾರಿಗಳ ನೆರವಿನೊಂದಿಗೆ ಪ್ರಕರಣವನ್ನು ಎಚ್ಚರಿಕೆಯಿಂದ ತನಿಖೆ ನಡೆಸುತ್ತಿದ್ದಾರೆ, ಏಕೆಂದರೆ ಆರೋಪಿತ ಕುಟುಂಬವು ಉನ್ನತ ಹಿನ್ನೆಲೆಗೆ ಸೇರಿದೆ. ಈ ವಿಷಯವನ್ನು ಕೂಲಂಕುಷವಾಗಿ ಪರಿಶೀಲಿಸಲಾಗುತ್ತಿದೆ ಎಂದು ಹೆಚ್ಚುವರಿ ಡಿಸಿಪಿ ಖಚಿತಪಡಿಸಿದ್ದಾರೆ .

For Latest News Updates, Join Our Whatsapp Community🚩
RELATED ARTICLES

Most Popular