ಆಂಧ್ರ ಪ್ರದೇಶ : ಪ್ರವಾಹ ಪೀಡಿತ ಪ್ರದೇಶ ವೀಕ್ಷಣೆ ವೇಳೆ ಧಿಡೀರ್ ಆಗಿ ರೈಲು ಬಂದಿದ್ದು, ಕೂದಲೆಳೆ ಅಂತರದಲ್ಲಿ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಪಾರಾಗಿದ್ದಾರೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಗುರುವಾರ ವಿಜಯವಾಡದ ಪ್ರವಾಹ ಪೀಡಿತ ಮಧುರಾನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವಘಡವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.
ನಾಯ್ಡು ಮತ್ತು ಅವರ ತಂಡವು ರೈಲ್ವೆ ಹಳಿಯ ಕೆಳಗೆ ಜಲಾವೃತವಾದ ತೊರೆಯನ್ನು ವೀಕ್ಷಿಸಲು ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಇದ್ದಕ್ಕಿದ್ದಂತೆ ವಿರುದ್ಧ ದಿಕ್ಕಿನಿಂದ ರೈಲು ಸಮೀಪಿಸಿತು,
ನಾಯ್ಡು, ಅವರ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ಅವರನ್ನು ಕೂಡಲೇ ಪಕ್ಕಕ್ಕೆ ಎಳೆದಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Tense Moments as CM Chandrababu Naidu Stands Near Speeding Train During Flood Inspection
Tense moments unfolded on Thursday when Andhra Pradesh Chief Minister N Chandrababu Naidu found himself just steps away from a speeding train while inspecting flood-affected areas near… pic.twitter.com/jSH5c5hSZq
— Sudhakar Udumula (@sudhakarudumula) September 6, 2024

