HomeEntertainment'ಕಾಲಾ ಪತ್ತರ್' ಚಿತ್ರದ ''ನನ್ನ ವಿಹಾರ'' ಹಾಡು ರಿಲೀಸ್

‘ಕಾಲಾ ಪತ್ತರ್’ ಚಿತ್ರದ ”ನನ್ನ ವಿಹಾರ” ಹಾಡು ರಿಲೀಸ್

ವಿಕ್ಕಿ ವರುಣ್ ನಟಿಸಿ ನಿರ್ದೇಶಿಸಿರುವ ‘ಕಾಲಾ ಪತ್ತರ್’ ಚಿತ್ರ ತನ್ನ ಹಾಡುಗಳಿಂದಲೇ ಎಲ್ಲರ ಗಮನ ಸೆಳೆದಿದ್ದು, ಇನ್ನೇನು ತೆರೆ ಮೇಲೆ ಬರಲು ಸಜ್ಜಾಗಿದೆ.’ಕಾಲಾ ಪತ್ತರ್’ ಸಿನಿಮಾದ ‘ನನ್ನ ವಿಹಾರ’ ಎಂಬ ಹಾಡು ನಿನ್ನೆ ಯಷ್ಟೇ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಈ ಹಾಡಿಗೆ ಸಾಯಿ ವಿಘ್ನೇಶ್ ಮತ್ತು ಐಶ್ವರ್ಯ ರಂಗ ರಾಜನ್ ಧ್ವನಿಯಾಗಿದ್ದು, ಅನೂಪ್ ಸೀಳಿನ್ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ.

ಈ ಚಿತ್ರದಲ್ಲಿ ವಿಕ್ಕಿ ವರುಣ್ ಗೆ ಜೋಡಿಯಾಗಿ ಧನ್ಯ ರಾಮ್ ಕುಮಾರ್ ಅಭಿನಯಿಸಿದ್ದು, ನಾಗಾಭರಣ, ಅಚ್ಯುತ್ ಕುಮಾರ್, ಸಂಪತ್, ರಾಜೇಶ್ ನಟರಂಗ, ಗಲ್ಲಿ ನಟ, ಬಸು ಹಿರೇಮಠ, ಕಾಂತರಾಜ್ ಕಡ್ಡಿಪುಡಿ ಉಳಿದ ಪಾತ್ರ ವರ್ಗದಲ್ಲಿದ್ದಾರೆ. ದೀಪು ಎಸ್ ಕುಮಾರ್ ಸಂಕಲನ, ಪುಟ್ಟರಾಜು ವೇಷಭೂಷಣ,  ಸಂದೀಪ್ ಕುಮಾರ್ ಛಾಯಾಗ್ರಾಹಣ, ಹಾಗೂ ವಿಕ್ರಮ್ ಮೋರ್ ಮತ್ತು ಮಾಸ್ ಮಾದ ಅವರ ಸಾಹಸ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular