ಬೆಂಗಳೂರು : ಶಾಲೆಯ ಬದಲು ಬಿರಿಯಾನಿ ಹೋಟೆಲ್ ನಿರ್ಮಿಸಿದ್ದು ನಿಯಮ ಉಲ್ಲಂಘನೆ ಅಲ್ಲವೇ? ಎಂದು ಚಲವಾದಿ ನಾರಾಯಣಸ್ವಾಮಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
ಚಲವಾದಿ ನಾರಾಯಣಸ್ವಾಮಿಯವರೇ, ಸಿಎ ನಿವೇಶನವನ್ನು ಯಾರು ಬೇಕಿದ್ದರೂ ಪಡೆಯಬಹುದು, ಆ ನಿವೇಶನ ಇರುವುದು ಕೈಗಾರಿಕೆ ನಡೆಸುವುದಕ್ಕಲ್ಲ, ನಾಗರಿಕ ಸೌಲಭ್ಯ ನಿರ್ಮಿಸಲು ಸೀಮಿತ, ಸಿದ್ಧಾರ್ಥ ವಿಹಾರ ಟ್ರಸ್ಟ್ ಕೂಡ ಎಲ್ಲಾ ನಿಯಮಗಳನ್ನು ಪಾಲಿಸಿ, ಅರ್ಹತೆಯಿಂದಲೇ ಪಡೆದುಕೊಂಡಿದೆ. ಆದರೆ ನಾರಾಯಣಸ್ವಾಮಿ ಅವರು ಕರ್ನಾಟಕ ಗೃಹ ಮಂಡಳಿಯ ನಿರ್ದೇಶಕರಾಗಿದ್ದಾಗ ಶಾಲೆ ನಿರ್ಮಿಸುತ್ತೇನೆ ಎಂದು ತಮ್ಮ ಟ್ರಸ್ಟ್ ಗೆ ನಿವೇಶನ ಮಂಜೂರು ಮಾಡಿಸಿಕೊಂಡಿದ್ದು ಅಧಿಕಾರ ದುರ್ಬಳಕೆ ಅಲ್ಲವೇ? ಶಾಲೆಯ ಬದಲು ಬಿರಿಯಾನಿ ಹೋಟೆಲ್ ನಿರ್ಮಿಸಿದ್ದು ನಿಯಮ ಉಲ್ಲಂಘನೆ ಅಲ್ಲವೇ? ಈ ಬಗ್ಗೆ ನಾರಾಯಣಸ್ವಾಮಿಯವರು ಮೌನಕ್ಕೆ ಜಾರಿರುವುದು ಏಕೆ? ಉಂಡ ಮನೆಯ ಗಳ ಹಿರಿಯುವ ನಾರಾಯಣಸ್ವಾಮಿಯವರು ತಮ್ಮ ನಿವೇಶನ ಅಕ್ರಮದ ಬಗ್ಗೆ ಮಾತಾಡಲಿ. ರಾಜ್ಯಪಾಲರು ವಿಧಾನ ಪರಿಷತ್ ಸ್ಥಾನದಿಂದ ನಾರಾಯಣಸ್ವಾಮಿಯವರನ್ನು ವಜಾ ಮಾಡಲಿ ಎಂದು ಚಲವಾದಿ ನಾರಾಯಣಸ್ವಾಮಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.