HomeKarnatakaBREAKING : ಡೆಂಗ್ಯೂವನ್ನು ‘ಸಾಂಕ್ರಾಮಿಕ ಕಾಯಿಲೆ’ ಎಂದು ಘೋಷಿಸಿದ ರಾಜ್ಯ ಸರ್ಕಾರ, ಸ್ವಚ್ಛತೆ ಕಾಪಾಡದಿದ್ರೆ...

BREAKING : ಡೆಂಗ್ಯೂವನ್ನು ‘ಸಾಂಕ್ರಾಮಿಕ ಕಾಯಿಲೆ’ ಎಂದು ಘೋಷಿಸಿದ ರಾಜ್ಯ ಸರ್ಕಾರ, ಸ್ವಚ್ಛತೆ ಕಾಪಾಡದಿದ್ರೆ ದಂಡ ಫಿಕ್ಸ್..!

ಬೆಂಗಳೂರು : ರಾಜ್ಯದಲ್ಲಿ ಡೆಂಗ್ಯೂ ಅಟ್ಟಹಾಸ ಜೋರಾದ ಹಿನ್ನೆಲೆ ಡೆಂಗ್ಯೂ ವನ್ನು ಸಾಂಕ್ರಾಮಿಕ ಕಾಯಿಲೆ ಎಂದು ರಾಜ್ಯ ಸರ್ಕಾರ ಘೋಷಿಸಿದೆ.

ಮನೆ ಹಾಗೂ ಸುತ್ತಮುತ್ತಾ ಸ್ವಚ್ಚತೆ ಪಾಲಿಸದೇ ಇದ್ರೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ. ನಗರ ಪ್ರದೇಶದಲ್ಲಿ ಸ್ವಚ್ಚತೆ ಕಾಪಾಡದಿದ್ರೆ 400 ರೂ ದಂಡ, ಗ್ರಾಮಾಂತರದಲ್ಲಿ ಓಳಾಂಗಣ ಹಾಗೂ ಹೊರಾಂಗಣಕ್ಕೆ 200 ರೂಪಾಯಿ ದಂಡ ವಿಧಿಸಲಿದೆ.

• ಕೈಗಾರಿಕೆ, ಥಿಯೇಟರ್, ಶಾಲೆಗಳು, ಹಾಲ್, ರೆಸ್ಟೋರಂಟ್ , ಹೋಟೆಲ್, ತಿನಿಸುಗಳು, ಲಾಡ್ಜ್, ರೆಸಾರ್ಟ್, ಹೋಂ ಸ್ಟೇ, ಮಾರ್ಕೆಟ್, ಪಾರ್ಕ್, ಮಾಲ್ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ 1 ಸಾವಿರ ರೂ ದಂಡ ವಿಧಿಸಲಾಗುತ್ತದೆ. ತೆರೆದ ಸ್ಥಳಗಳಲ್ಲಿ ರೂಲ್ಸ್ ಬ್ರೇಕ್ ಮಾಡಿದರೆ – ನಗರದ ಪ್ರದೇಶದಲ್ಲಿ 2 ಸಾವಿರ ರೂಪಾಯಿ ದಂಡ, ಗ್ರಾಮಾಂತರದಲ್ಲಿ 1 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಡೆಂಗ್ಯೂದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಅಗತ್ಯ

• ಶಾಲಾ ಆವರಣದಲ್ಲಿ ಹಾಗೂ ಸುತ್ತಮುತ್ತಲಿನ ಜಾಗಗಳಲ್ಲಿ ಮತ್ತು ಇಲ್ಲಿನ ಘನ ತ್ಯಾಜ್ಯ ವಸ್ತುಗಳಲ್ಲಿ ನೀರು ಶೇಖರಣೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸತಕ್ಕದ್ದು. ಮತ್ತು ಇಂತಹ ಸನ್ನಿವೇಶಗಳ ಹತ್ತಿರ ಶಾಲಾ ವಿದ್ಯಾರ್ಥಿಗಳು ಸುತ್ತಾಡದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸತಕ್ಕದ್ದು ಹಾಗೂ ಇವುಗಳನ್ನು ತೆರವುಗೊಳಿಸಲು ಹಾಗೂ ವಿಲೇವಾರಿ ಮಾಡಲು ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳತಕ್ಕದ್ದು.

• ಇಂತಹ ಸಂದರ್ಭಗಳಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ, ಪುರ ಸಭೆ, ನಗರ ಸಭೆ, ಮಹಾನಗರ ಪಾಲಿಕೆಗಳ (ಸ್ಥಳೀಯ ಸಂಸ್ಥೆಗಳ) ಹಾಗೂ ಸ್ಥಳೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಸಹಕಾರದಿಂದ ಶಾಲಾ ಕಟ್ಟಡದಲ್ಲಿ ಅಥವಾ ಆವರಣದಲ್ಲಿ ಸಂಗ್ರಹವಾಗಿರುವ ನೀರನ್ನು ಹಾಗೂ ಇಂತಹ ಸನ್ನಿವೇಶಗಳನ್ನು ತೆರವುಗೊಳಿಸಲು ಮತ್ತು ಶಾಲಾ ಪರಿಸರಕ್ಕೆ ಸಾಂಕ್ರಾಮಿಕ ರೋಗ ನಿರೋಧಕ ದ್ರಾವಣಗಳನ್ನು ಕಾಲ-ಕಾಲಕ್ಕೆ ಸಿಂಪಡಿಸಲು ನಿಯಮಾನುಸಾರ ಅಗತ್ಯ ಕ್ರಮವಹಿಸತಕ್ಕದ್ದು.

“ಶಾಲೆಗಳಲ್ಲಿನ ನೀರಿನ ಸಂಗ್ರಹಕಗಳನ್ನು (ತೊಟ್ಟಿ, ಬ್ಯಾರೆಲ್ ಇತ್ಯಾದಿ)ಗಳನ್ನು ವಾರಕ್ಕೊಮ್ಮೆ ಉಜ್ಜಿ, ತೊಳೆದು, ಖಾಲಿ ಮಾಡಿ. ಒಣಗಿಸಿ ಭರ್ತಿ ಮಾಡಿದ ನಂತರ ಭದ್ರವಾದ ಮುಚ್ಚಳದಿಂದ ಮುಚ್ಚುವುದು.

ಶಾಲೆಗಳಲ್ಲಿ ಪ್ರಾರ್ಥನೆ ಸಮಯದಲ್ಲಿ ಡೆಂಗ್ಯೂ ಹಾಗೂ ಇತರೆ ಸಾಂಕ್ರಾಮಿಕ ರೋಗಗಳ ಕುರಿತು ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಹಾಗೂ ನಿಯಂತ್ರಣ ಕ್ರಮಗಳ ಕುರಿತು ಸ್ಥಳೀಯ ಆರೋಗ್ಯ ಸಿಬ್ಬಂದಿ / ಶಾಲಾ ಶಿಕ್ಷಕರ ಮೂಲಕ ವಿದ್ಯಾರ್ಥಿಗಳಿಗೆ ಆರೋಗ್ಯ ಶಿಕ್ಷಣ ನೀಡುವುದು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular