Watch | ಯಮಸ್ವರೂಪಿಯಾಗಿ ಬಂದ ಕಾರು; ಮನೆ ಮುಂದೆ ಕುಳಿತಿದ್ದ ಯುವಕ ಸ್ಥಳದಲ್ಲೇ ಸಾವು 03-09-2024 2:54PM IST / No Comments / Posted In: Latest News, India, Live News, Crime News ವೇಗವಾಗಿ ಬಂದ ಸ್ಕಾರ್ಪಿಯೋ ಎಸ್‌ಯುವಿ ಮನೆಯ ಹೊರಗೆ ಕುಳಿತಿದ್ದ ನಾಲ್ವರಿಗೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬರು ಸಾವನ್ನಪ್ಪಿದ್ದು ಮೂವರು ಗಾಯಗೊಂಡಿರುವ ಭೀಕರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಬುಲಂದ್‌ಶಹರ್‌ನ ಗುಲಾವತಿ ಪ್ರದೇಶದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಬಿಳಿ ಬಣ್ಣದ ಸ್ಕಾರ್ಪಿಯೋ ಕಾರ್ ಚಾಲಕನ ನಿಯಂತ್ರಣ ತಪ್ಪಿ ನಿವಾಸದ ಹೊರಗೆ ಕುರ್ಚಿಗಳ ಮೇಲೆ ಕುಳಿತಿದ್ದ ನಾಲ್ಕರಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಓರ್ವ ಯುವಕ ಸಾವನ್ನಪ್ಪಿದರೆ ಉಳಿದ ಮೂವರಿಗೆ ಗಂಭೀರ ಗಾಯಗಳಾಗಿವೆ. ಅಪಘಾತದ ದೃಶ್ಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ನಡೆಯುತ್ತಿದ್ದಂತೆ ಕಾರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಚಾಲಕನನ್ನು ಪತ್ತೆಹಚ್ಚಲು ಮತ್ತು ಅಪಘಾತಕ್ಕೆ ಅವನನ್ನು ಹೊಣೆಗಾರನನ್ನಾಗಿ ಮಾಡಲು ಅಧಿಕಾರಿಗಳು ಸಂಪೂರ್ಣ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಬುಲಂದ್‌ಶಹರ್ ಪೊಲೀಸರು ಘಟನೆಯ ಬಗ್ಗೆ ಅಥವಾ ಚಾಲಕನ ಸ್ಥಳದ ಬಗ್ಗೆ ಮಾಹಿತಿ ಇದ್ದರೆ ಪೊಲೀಸರಿಗೆ ನೀಡುವಂತೆ ಸಾರ್ವಜನಿಕರನ್ನು ಕೇಳಿಕೊಂಡಿದ್ದಾರೆ #Bulandshahr– घर के बाहर कुर्सी पर बैठे 4 लोगो को तेज रफ्तार स्कॉर्पियो ने रौंदा। हादसे में एक युवक की हुई मौत, 3 लोग गंभीर घायल।घर के बाहर लगे #CCTV कैमरे में कैद हुआ हादसा. गुलावठी कोतवाली क्षेत्र में हुआ हादसा।@Uppolice @bulandshahrpol #viral2024 #Trending #viralshort pic.twitter.com/nSw2SXR00H — विभोर अग्रवाल🇮🇳 (@IVibhorAggarwal) September 2, 2024