ಜೀವನದಲ್ಲಿನ ಪ್ರಮುಖ ಹಂತವೆಂದರೆ ವೈವಾಹಿಕ ಜೀವನಕ್ಕೆ ಕಾಲಿಡುವುದು. ಮದುವೆ ಬಗ್ಗೆ ಎಲ್ಲರಿಗೂ ಕನಸುಗಳಿರುತ್ತವೆ. ಇಂತಹ ಸಂದರ್ಭವನ್ನು ವಿಶೇಷವಾಗಿರಿಸಿಕೊಳ್ಳಬೇಕು, ತಾನು ಕೈಹಿಡಿಯುವ ಸಂಗಾತಿ ಸುಂದರವಾಗಿರಬೇಕು. ನನ್ನ ಭಾವನೆಗಳಿಗೆ ಸ್ಪಂದಿಸಿ ಸುಖಕರ ಜೀವನ ನಡೆಸಬೇಕು ಎಂಬೆಲ್ಲಾ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಈ ನಡುವೆ ಅರೇಂಜ್ಡ್ ಮ್ಯಾರೇಜ್ ಉತ್ತಮವೋ ? ಲವ್ ಮ್ಯಾರೇಜ್ ಆಯ್ಕೆ ಉತ್ತಮವೋ ಎಂಬ ಚರ್ಚೆಯೂ ನಡೆಯುತ್ತಿದೆ.
ಜೋಡಿಯು ಒಟ್ಟಿಗೆ ಸಮಯ ಕಳೆದಿರುವುದರಿಂದ, ಒಬ್ಬರನ್ನೊಬ್ಬರು ಚೆನ್ನಾಗಿ ತಿಳಿದುಕೊಳ್ಳುವುದರಿಂದ ಮತ್ತು ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡಿರುವುದರಿಂದ ಅರೇಂಜ್ಡ್ ಮ್ಯಾರೇಜ್‌ಗಿಂತ ಪ್ರೇಮ ವಿವಾಹಗಳು ಉತ್ತಮವೆಂದು ಹಲವರು ಭಾವಿಸುತ್ತಾರೆ.
ಆದಾಗ್ಯೂ ಇತರ ಜನರು ನಿಯೋಜಿತ ವಿವಾಹ ( ಅರೇಂಜ್ಡ್ ಮ್ಯಾರೇಜ್) ಗಳನ್ನು ಬೆಂಬಲಿಸುತ್ತಾರೆ. ಕಾಲಾನಂತರದಲ್ಲಿ ದಂಪತಿ ಪರಸ್ಪರ ತಿಳಿದುಕೊಳ್ಳಲು ಅವಕಾಶ ಸಿಗುತ್ತದೆ. ಇದು ಆರೋಗ್ಯಕರ ಮತ್ತು ಸಂತೋಷದ ದಾಂಪತ್ಯವನ್ನು ಉತ್ತೇಜಿಸುತ್ತದೆ ಎಂದೆಲ್ಲಾ ಹೇಳಲಾಗುತ್ತದೆ. ಆದರೆ ಅರೇಂಜ್ಡ್ ಮ್ಯಾರೇಜ್ ಹೇಗಿರುತ್ತದೆ ಎಂಬುದಕ್ಕೆ ಸಾಕ್ಷಿಯೆಂಬಂತೆ ವಿಡಿಯೋವೊಂದು ಆನ್ ಲೈನ್ ನಲ್ಲಿ ಕಾಣಿಸಿಕೊಂಡಿದ್ದು ನಗು ತರಿಸಿದೆ.
ವೈರಲ್ ವೀಡಿಯೊದಲ್ಲಿ ವಧು-ವರರು ಒಟ್ಟಿಗೆ ಕುಳಿತಿರುವ ವಿವಾಹದ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಅವರ ಸುತ್ತ ಅನೇಕ ಸಂಬಂಧಿಕರು ಕುಳಿತಿದ್ದಾರೆ. ವೀಡಿಯೊದಲ್ಲಿ ವಧು ವರನ ‘ಸೆಹ್ರಾ’ (ವರ ಧರಿಸುವ ಸಾಂಪ್ರದಾಯಿಕ ಮದುವೆಯ ಮುಸುಕು) ವನ್ನು ಮೇಲೆತ್ತುತ್ತಾಳೆ. ವರನ ಮುಖ ನೋಡಿದ ವಧು ದಿಗ್ರ್ಬ್ರಾಂತಳಾಗುತ್ತಾಳೆ. ಸುಂದರ ವಧು ತನಗಿಂತ ಹಿರಿಯ, ಹೆಚ್ಚು ವಯಸ್ಸಾದವನಂತೆ ಕಾಣುವ ವರನನ್ನು ಕಂಡು ಜೋರಾಗಿ ಕಿರುಚುತ್ತಾಳೆ.
ಈ ಮನರಂಜಿಸುವ ವೀಡಿಯೊವನ್ನು ಇಂಟರ್ನೆಟ್ ನಲ್ಲಿ ಹಂಚಿಕೊಳ್ಳಲಾಗಿದೆ. ಇದು ತಮಾಷೆಗಾಗಿ ಮಾಡಿರುವ ರೀಲ್ ಎಂಬುದು ಗೋಚರವಾದರೂ ನಿಯೋಜಿತ ಮದುವೆಗಳು ಈ ರೀತಿಯೂ ಇರುತ್ತವೆ ಎಂಬುದನ್ನ ಹಾಸ್ಯದ ರೂಪದಲ್ಲಿ ತಿಳಿಸಲಾಗಿದೆ. ವೈರಲ್ ವಿಡಿಯೋ 2 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದಿದ್ದು ನೆಟ್ಟಿಗರು ನಕ್ಕಿದ್ದಾರೆ.