ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಭರ್ಜರಿ ಡಿಸ್ಕೌಂಟ್ ಆಫರ್ ನೀಡುತ್ತಿದೆ. ಸೆಪ್ಟೆಂಬರ್ 2 ರಿಂದಲೇ ಆಲ್ಟೊ ಕೆ 10, ಎಸ್-ಪ್ರೆಸ್ಸೊ ಸೇರಿದಂತೆ ಹಲವು ಕಾರುಗಳ ಮೇಲೆ ಭಾರೀ ರಿಯಾಯಿತಿ ಸಿಗುತ್ತಿದೆ. ಎಸ್-ಪ್ರೆಸ್ಸೋ ಎಲ್‌ಎಕ್ಸ್‌ಐ ಪೆಟ್ರೋಲ್ ಕಾರಿನ ಬೆಲೆ 2,000 ರೂಪಾಯಿ ಕಡಿಮೆಯಾಗಿದೆ. ಆಲ್ಟೊ ಕೆ 10 ವಿಎಕ್ಸ್‌ಐ ಪೆಟ್ರೋಲ್ ಮಾದರಿಯ ಬೆಲೆಯಲ್ಲಿ 6,500 ರೂಪಾಯಿ ಕಡಿತ ಮಾಡಲಾಗಿದೆ.
ಆಲ್ಟೊ ಕೆ10 ಎಕ್ಸ್ ಶೋ ರೂಂ ಬೆಲೆ 3,99,000 ದಿಂದ ಪ್ರಾರಂಭ. ಎಸ್-ಪ್ರೆಸ್ಸೊ ಕಾರಿನ ಬೆಲೆ 4,26,500 ರೂಪಾಯಿಯಿಂದ ಪ್ರಾರಂಭವಾಗುತ್ತವೆ. ಮಾರುತಿ ಸುಜುಕಿ ಕಂಪನಿಯು ಆಗಸ್ಟ್ 2023 ಕ್ಕೆ ಹೋಲಿಸಿದರೆ ಶೇ.4ರಷ್ಟು ಕಡಿಮೆ ಕಾರುಗಳನ್ನು ಮಾರಾಟ ಮಾಡಿದೆ. ಆದರೂ ಒಟ್ಟು ಮಾರಾಟವು ಮಾಸಿಕ ಆಧಾರದ ಮೇಲೆ 1.82 ಲಕ್ಷ ಯುನಿಟ್‌ಗಳಲ್ಲಿ 1 ಪ್ರತಿಶತ ಹೆಚ್ಚಾಗಿದೆ. ಎಸ್-ಪ್ರೆಸ್ಸೊ ಮತ್ತು ಆಲ್ಟೊ ಕಾರುಗಳ ಒಟ್ಟು ಮಾರಾಟವು ಆಗಸ್ಟ್ 2023 ರಲ್ಲಿ 12,209 ಯುನಿಟ್‌ಗಳಿತ್ತು. ಇದು ಆಗಸ್ಟ್ 2024 ರಲ್ಲಿ 10,648 ಯುನಿಟ್‌ಗಳಿಗೆ ಇಳಿಕೆಯಾಗಿದೆ.
ಮಾರುತಿ ಸುಜುಕಿಯ ಯುಟಿಲಿಟಿ ವಾಹನಗಳ ಮಾರಾಟವು ವರ್ಷದಿಂದ ವರ್ಷಕ್ಕೆ 7 ಪ್ರತಿಶತದಷ್ಟು ಬೆಳವಣಿಗೆ ಕಂಡಿದ್ದು, ಕಾಂಪ್ಯಾಕ್ಟ್ ವಿಭಾಗದಲ್ಲಿ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ.20 ರಷ್ಟು ಮತ್ತು ತಿಂಗಳಿಗೆ 1 ಪ್ರತಿಶತದಷ್ಟು ಕಡಿಮೆಯಾಗಿದೆ. ಕಾಂಪ್ಯಾಕ್ಟ್ ವಿಭಾಗದಲ್ಲಿ ಆಗಸ್ಟ್ 2024 ರಲ್ಲಿ 58,051 ವಾಹನಗಳನ್ನು ಮಾರಾಟ ಮಾಡಲಾಗಿದೆ. ಇದು ಆಗಸ್ಟ್ 2023 ರಲ್ಲಿ 72,451 ವಾಹನಗಳು ಬಿಕರಿಯಾಗಿದ್ದವು.
ಮಾರುತಿ ಸುಜುಕಿಯಿಂದ ಸಣ್ಣ ಕಾರುಗಳ ಮಾರಾಟದಲ್ಲಿನ ಕುಸಿತವು 2023ರ ಆರಂಭದಿಂದಲೂ ಮುಂದುವರೆದಿದೆ. ಮಾರುತಿ ಸುಜುಕಿಯ ಮಿನಿ ಮತ್ತು ಕಾಂಪ್ಯಾಕ್ಟ್ ವಿಭಾಗದ ವಾಹನಗಳ ಮಾರಾಟವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 2024ರ ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ಶೇ.13ರಷ್ಟು ಹೆಚ್ಚು ಕಡಿಮೆಯಾಗಿದೆ. ಆದರೆ ಯುಟಿಲಿಟಿ ವೆಹಿಕಲ್ ವಿಭಾಗದ ಮಾರಾಟವು ಇದೇ ಅವಧಿಯಲ್ಲಿ 14 ಪ್ರತಿಶತದಷ್ಟು ಹೆಚ್ಚಾಗಿದೆ.