HomeKarnatakaBIG NEWS: ಕಾರ್ಕಳ ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಪ್ರಕರಣ: ತನಿಖೆ ವೇಳೆ ಸ್ಫೋಟಕ ಮಾಹಿತಿ...

BIG NEWS: ಕಾರ್ಕಳ ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಪ್ರಕರಣ: ತನಿಖೆ ವೇಳೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಆರೋಪಿ

ಉಡುಪಿ: ಕಾರ್ಕಳದಲ್ಲಿ ಯುವತಿಯನ್ನು ಕಿಡ್ನ್ಯಾಪ್ ಮಾಡಿ ಡ್ರಗ್ಸ್ ನೀಡಿ ಅತ್ಯಾಚಾರ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ವೇಳೆ ಆರೋಪಿ ಸ್ಫೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾನೆ.

ಆರೋಪಿ ಅಲ್ತಾಫ್ ಕಾರಿನಲ್ಲಿ ಯುವತಿಯನ್ನು ಕರೆದೊಯ್ದು ಅತ್ಯಾಚಾರವೆಸಗಿದ್ದ. ಯುವತಿಗೆ ಸಿಂಥೆಟಿಕ್ ಡ್ರಗ್ಸ್ ನೀಡಿದ್ದಾಗಿ ವಿಚಾರಣೆ ವೇಳೆ ಹೇಳಿದ್ದಾನೆ. ಅಲ್ಲದೇ ಆತನಿಗೆ ಡ್ರಗ್ಸ್ ಸಿಕ್ಕಿದ್ದು ಎಲ್ಲಿಂದ ಎಂಬುದನ್ನೂ ಬಾಯ್ಬಿಟ್ಟಿದ್ದಾನೆ.

ಅಲ್ತಾಫ್ ಹಾಗೂ ಗ್ಯಾಂಗ್ ಬೆಂಗಳೂರಿಗೆ ತೆರಳಿ ವ್ಯಕ್ತಿಯೋರ್ವನಿಂದ ಡ್ರಗ್ಸ್ ಖರೀದಿಸಿತ್ತು. ಅದೇ ಡ್ರಗ್ಸ್ ನ್ನು ಮದ್ಯದಲ್ಲಿ ಬೆರೆಸಿ ಯುವತಿಗೆ ಕುಡಿಸಿ ಅಲ್ತಾಪ್ ಅತ್ಯಾಚಾರವೆಸಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನೊಂದು ಶಾಕಿಂಗ್ ವಿಚಾರವೆಂದರೆ ಬಿಜೆಪಿ ಕಾರ್ಯಕರ್ತ ಅಭಯ್ ಮೂಲಕ ಅಲ್ತಾಫ್ ಗೆ ಬೆಂಗಳೂರು ಮೂಲದ ಡ್ರಗ್ಸ್ ಸೇಲ್ ಮಾಡುವ ವ್ಯಕ್ತಿ ಪರಿಚಯವಾಗಿದ್ದನಂತೆ. ಅಭಯ್ ತನ್ನ ಜೊತೆ ಅಲ್ತಾಫ್ ಹಗೂ ಇತರರನ್ನು ಬೆಂಗಳೂರಿಗೆ ಕರೆದೊಯ್ದು ಡ್ರಗ್ಸ್ ಖರೀದಿಸಿ ಬಳಿಕ ಆ ಡ್ರಗ್ಸ್ ಗಳನ್ನು ಹೆಚ್ಚಿನ ಬೆಲೆಗೂ ಮಾರಾಟ ಮಾಡಿದ್ದಾಗಿ ತಿಳಿಸಿದ್ದಾನೆ. ಉಳಿದ ಡ್ರಗ್ಸ್ ನ್ನು ಅಲ್ತಾಫ್ ನೀಚ ಕೃತ್ಯಕ್ಕೆ ಬಳಸಿದ್ದ.

ಪ್ರಕರಣ ಸಂಬಂಧ ಈವರೆಗೆ ಐವರು ಆರೋಪಿಗಳನ್ನು ಪೊಲಿಸರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular