ಬೆಂಗಳೂರು: ಬೆಂಗಳೂರಿನಲ್ಲಿ ಶೀಲ ಶಂಕಿಸಿ ಪತಿಯೇ ಪತ್ನಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಕೆಂಗೇರಿ ವಿಶ್ವೇಶ್ವರಯ್ಯ ಲೇಔಟ್ ನ ಮನೆಯಲ್ಲಿ ಘಟನೆ ನಡೆದಿದೆ.
ನವ್ಯಾ(24) ಕೊಲೆಯಾದ ಮಹಿಳೆ. ನವ್ಯಾ ಅವರನ್ನು ಕುರ್ಚಿಗೆ ಕಟ್ಟಿ ಹಾಕಿ ಕತ್ತು ಕೊಯ್ದು ಕೊಲೆ ಮಾಡಲಾಗಿದೆ. ಪತ್ನಿಯನ್ನು ಭೀಕರವಾಗಿ ಕೊಂದ ಪತಿ ಕಿರಣ್ ಪರಾರಿಯಾಗಿದ್ದಾನೆ.
ಮೂರು ವರ್ಷಗಳ ಹಿಂದೆ ನವ್ಯಾ ಮತ್ತು ಕಿರಣ್ ಮದುವೆಯಾಗಿದ್ದರು. ಕೋರಿಯೋಗ್ರಾಫರ್ ಆಗಿದ್ದ ನವ್ಯಾ ಖಾಸಗಿ ಶಾಲೆಯಲ್ಲಿ ಮಕ್ಕಳಿಗೆ ನೃತ್ಯ ಹೇಳಿ ಕೊಡುತ್ತಿದ್ದರು. ಘಟನಾ ಸ್ಥಳಕ್ಕೆ ಕೆಂಗೇರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.