HomeLive Newsಮಹಾರಾಜ ಟ್ರೋಫಿ: ಇಂದು ಮೊದಲ ಪಂದ್ಯದಲ್ಲಿ ಮೈಸೂರ್ ವಾರಿಯರ್ಸ್ ಹಾಗೂ ಮಂಗಳೂರು ಡ್ರ್ಯಾಗನ್ಸ್ ಕಾದಾಟ

ಮಹಾರಾಜ ಟ್ರೋಫಿ: ಇಂದು ಮೊದಲ ಪಂದ್ಯದಲ್ಲಿ ಮೈಸೂರ್ ವಾರಿಯರ್ಸ್ ಹಾಗೂ ಮಂಗಳೂರು ಡ್ರ್ಯಾಗನ್ಸ್ ಕಾದಾಟ

ಈ ಬಾರಿಯ ಮಹಾರಾಜ ಟ್ರೋಫಿ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದು, ಇನ್ನೇನು ಮುಕ್ತಾಯ ಹಂತಕ್ಕೆ ತಲುಪಿದೆ. ನಿನ್ನೆಯಷ್ಟೇ ನಾಲ್ಕು ತಂಡಗಳು ಸೆಮಿ ಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದು, ಆಗಸ್ಟ್ 30 ರಂದು ನಾಲ್ಕು ತಂಡಗಳು ಫೈನಲ್ ಗಾಗಿ ಹೋರಾಟ ನಡೆಸಲಿವೆ.

ಇಂದು ಮಹಾರಾಜ ಟ್ರೋಫಿಯ ಮೊದಲ ಪಂದ್ಯದಲ್ಲೇ  ಮೈಸೂರ್ ವಾರಿಯರ್ಸ್ ಮತ್ತು ಮಂಗಳೂರು ಡ್ರ್ಯಾಗನ್ಸ್ ಮುಖಾಮುಖಿಯಾಗುತ್ತಿವೆ. ಕರುಣ್ ನಾಯರ್ ನಾಯಕತ್ವದ ಮೈಸೂರ್ ವಾರಿಯರ್ಸ್ ಈಗಾಗಲೇ ಪ್ಲೇ ಆಫ್ ತಲುಪಿದ್ದು, ಯಾವುದೇ ಆತಂಕವಿಲ್ಲದೆ ಉತ್ಸಾಹದಿಂದ ಇಂದು ಕಣಕ್ಕಿಳಿಯಲಿದೆ. ಮತ್ತೊಂದೆಡೆ ಆರಂಭದಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಮಂಗಳೂರು ಡ್ರ್ಯಾಗನ್ ತಂಡ ಇತ್ತೀಚಿಗೆ ಸಾಲು ಸಾಲು ಪಂದ್ಯಗಳನ್ನು ಸೋಲುವ ಮೂಲಕ ಸೆಮಿ ಫೈನಲ್ ಕನಸನ್ನು ನುಚ್ಚು ನೂರು ಮಾಡಿಕೊಂಡಿದ್ದು, ಇಂದು ಹಾಗೂ ನಾಳೆ ತನ್ನ ಕೊನೆಯ  ಪಂದ್ಯಗಳನ್ನಾಡಲು ಸಜ್ಜಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular