HomeLive Newsಮಹಾರಾಜ ಟ್ರೋಫಿ; ಇಂದು ಮೊದಲನೆ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ ಹಾಗೂ ಗುಲ್ಬರ್ಗ ಮೈಸ್ಟಿಕ್ಸ್ ಮುಖಾಮುಖಿ

ಮಹಾರಾಜ ಟ್ರೋಫಿ; ಇಂದು ಮೊದಲನೆ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ ಹಾಗೂ ಗುಲ್ಬರ್ಗ ಮೈಸ್ಟಿಕ್ಸ್ ಮುಖಾಮುಖಿ

ಮಹಾರಾಜ ಟ್ರೋಫಿ ಇನ್ನೇನು ಅಂತಿಮ ಘಟ್ಟ ತಲುಪಿದ್ದು, ಬೆಂಗಳೂರು ಬ್ಲಾಸ್ಟರ್ಸ್, ಹುಬ್ಬಳ್ಳಿ ಟೈಗರ್ಸ್, ಮೈಸೂರು ವಾರಿಯರ್ಸ್, ಸೇರಿದಂತೆ ಗುಲ್ಬರ್ಗ ಮೈಸ್ಟಿಕ್ಸ್ ತಂಡ ಈಗಾಗಲೇ ಸೆಮಿ ಫೈನಲ್ ಪ್ರವೇಶಿಸಿದ್ದು, ಇದೆ ಆಗಸ್ಟ್ 30ಕ್ಕೆ ಸೆಮಿ ಫೈನಲ್ ಪಂದ್ಯಗಳು ಆರಂಭವಾಗಲಿವೆ.

ಮಹಾರಾಜ ಟ್ರೋಫಿಯ ಲೀಗ್ ಹಂತದ ಪಂದ್ಯಗಳು ಇನ್ನೇನು ಮುಕ್ತಾಯಗೊಳ್ಳಲಿದ್ದು,  ಕೇವಲ ಆರು ಪಂದ್ಯಗಳು ಉಳಿದಿವೆ. ಇಂದು ಮೊದಲ ಪಂದ್ಯದಲ್ಲೇ  ಶಿವಮೊಗ್ಗ ಲಯನ್ಸ್ ಹಾಗೂ ಗುಲ್ಬರ್ಗ ಮೈಸ್ಟಿಕ್ಸ್ ಮುಖಾಮುಖಿಯಾಗಲಿವೆ. ಶಿವಮೊಗ್ಗ ಲಯನ್ಸ್ ಈಗಾಗಲೇ ಸೆಮಿ ಫೈನಲ್ ರೇಸ್ ನಿಂದ  ಹೊರಗುಳಿದಿದ್ದು, ತನ್ನ ಪ್ರತಿಷ್ಟೆಗಾಗಿ ಈ ಪಂದ್ಯವನ್ನು ಗೆಲ್ಲಲು ನೋಡುತ್ತಿದೆ. ಇದಾದ ಬಳಿಕ ಮತ್ತೊಂದು ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ಹಾಗೂ ಹುಬ್ಬಳ್ಳಿ ಟೈಗರ್ಸ್ ಕಾದಾಡಲಿವೆ.

For Latest News Updates, Join Our Whatsapp Community🚩
RELATED ARTICLES

Most Popular