HomeKarnataka'ನನ್ನ ವ್ಯಕ್ತಿತ್ವದಲ್ಲಿ 40 ವರ್ಷದಿಂದ ಇಲ್ಲದ ಕಪ್ಪುಚುಕ್ಕೆಯನ್ನು BJP-JDS ಈಗ ಹುಡುಕುತ್ತಿವೆ' : ಸಿಎಂ ಸಿದ್ದರಾಮಯ್ಯ...

‘ನನ್ನ ವ್ಯಕ್ತಿತ್ವದಲ್ಲಿ 40 ವರ್ಷದಿಂದ ಇಲ್ಲದ ಕಪ್ಪುಚುಕ್ಕೆಯನ್ನು BJP-JDS ಈಗ ಹುಡುಕುತ್ತಿವೆ’ : ಸಿಎಂ ಸಿದ್ದರಾಮಯ್ಯ ವ್ಯಂಗ್ಯ

ಬೆಂಗಳೂರು : ನನ್ನ ವ್ಯಕ್ತಿತ್ವದಲ್ಲಿ 40 ವರ್ಷದಿಂದ ಇಲ್ಲದ ಕಪ್ಪುಚುಕ್ಕೆಯನ್ನು ಬಿಜೆಪಿ-ಜೆಡಿಎಸ್ ಈಗ ಹುಡುಕುತ್ತಿವೆ. ನಾನು ಮಂತ್ರಿಯಾಗಿ 40 ವರ್ಷ ಆಯ್ತು. ಇಷ್ಟು ವರ್ಷ ಮಾಡದ ತಪ್ಪನ್ನು ಈಗ ಮಾಡ್ತೀನಾ? ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಗೋಕಾಕ ತಾಲೂಕಿನ ಕಲ್ಲೋಳಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ನನ್ನ ವ್ಯಕ್ತಿತ್ವದಲ್ಲಿ 40 ವರ್ಷದಿಂದ ಇಲ್ಲದ ಕಪ್ಪುಚುಕ್ಕೆಯನ್ನು ಬಿಜೆಪಿ-ಜೆಡಿಎಸ್ ಈಗ ಹುಡುಕುತ್ತಿವೆ. ನಾನು ಮಂತ್ರಿಯಾಗಿ 40 ವರ್ಷ ಆಯ್ತು. ಇಷ್ಟು ವರ್ಷ ಮಾಡದ ತಪ್ಪನ್ನು ಈಗ ಮಾಡ್ತೀನಾ? ನಾನು ಮಾಡದಿರುವ ತಪ್ಪನ್ನು ಷಡ್ಯಂತ್ರದಿಂದ ನನ್ನ ತಲೆಗೆ ಕಟ್ಟುವ ಪ್ರಯತ್ನ ಮಾಡ್ತಿದ್ದಾರೆ. ನಾವು-ನೀವು ಒಟ್ಟಾಗಿ ಈ ಷಡ್ಯಂತ್ರ ಸೋಲಿಸೋಣ. ಎಲ್ಲರೂ ಒಟ್ಟಾಗಿರಿ. 7 ಕೋಟಿ ಜನರ ಆಶೀರ್ವಾದ ನನ್ನ ಮೇಲೆ ಇರುವವರೆಗೂ ನನ್ನನ್ನು ಅಧಿಕಾರದಿಂದ ಇಳಿಸಲು ಸಾಧ್ಯವಿಲ್ಲ. ಹಿಂದುಳಿದ ಸಮುದಾಯದಿಂದ ಬಂದು ಎರಡು ಬಾರಿ ಸಿಎಂ ಆದೆ ಎಂದು ಬಿಜೆಪಿ-ಜೆಡಿಎಸ್ ಗೆ ಸಹಿಸಲು ಆಗುತ್ತಿಲ್ಲ. ಆದ್ದರಿಂದ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ಇದಕ್ಕೆ ನಾವು ಅವಕಾಶ ಕೊಡಬಾರದು. ನಮ್ಮ ಸರ್ಕಾರ ಇರುವವರೆಗೂ ಬಡವರ, ಮಧ್ಯಮ ವರ್ಗದವರ ಪರವಾದ ಗ್ಯಾರಂಟಿ ಕಾರ್ಯಕ್ರಮಗಳು ಜಾರಿಯಲ್ಲಿದ್ದು ಸದಾ ನಮ್ಮ ನೆರವಿನ ಹಸ್ತ ಬಡವರ ಪರವಾಗಿ ಇರುತ್ತದೆ ಎಂದು ಅವರು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular